ಚಂದನವನ : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮರೆಯಾಗಿ ಒಂದು ತಿಂಗಳು ಕಳೆಯುತ್ತಾ ಬಂದಿದೆ. ಆದರೆ, ಕರುನಾಡಿನ ದುಃಖ ಇಂದಿಗೂ ಮಾಸಿಲ್ಲ. ಈ ನಡುವೆ ಅಪ್ಪು ಅಭಿಮಾನಿಯೊಬ್ಬರು ಪೋಟೋವನ್ನು ಹಿಡಿದು ದೇಗಲದ 18 ಮೆಟ್ಟಿಲು ಹತ್ತಿ ಅಯ್ಯಪ್ಪನ ದರ್ಶನ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರು ಅಯ್ಯಪ್ಪನ ಭಕ್ತರಾಗಿದ್ದರು. ಕೊನೆಯವರೆಗೂ ಮಾಲೆ ಧರಿಸಿ ಅಯ್ಯಪ್ಪನ ದರ್ಶನ ಮಾಡುವುದು ತಪ್ಪಿಸುತ್ತಿರಲಿಲ್ಲ. ರಾಜ್ ಕುಮಾರ್ ಅವರ ಅಯ್ಯಪ್ಪ ಸ್ವಾಮಿ ಮೇಲಿನ ನಂಬಿಕೆ ಅವರ ಮೂವರು ಮಕ್ಕಳಿಗೂ ಇದ್ದು, ಅವರೂ ಆಗಾಗ ಅಯ್ಯಪ್ಪನ ಮಾಲೆ ಧರಿಸಿ ಕಟ್ಟುನಿಟ್ಟಾದ ವ್ರತ ಮಾಡಿ ಶಬರಿಮಲೆಗೆ ಹೋಗಿ ಬರುತ್ತಿದ್ದರು . ಶಿವರಾಜ್ ಕುಮಾರ್, ಪುನೀತ್ ರಾಜ್ಕುಮಾರ್ ಇಬ್ಬರೂ ಪ್ರತಿವರ್ಷ ಅಯ್ಯಪ್ಪನ ದರ್ಶನ ಮಾಡುತ್ತಿದ್ದರು. ಆದರೆ, ಈ ಬಾರಿ ಅವರ ಅಭಿಮಾನಿಯೊಬ್ಬ ಅಪ್ಪು ಫೋಟೋ ಹಿಡಿದು 18 ಮೆಟ್ಟಿಲು ಹತ್ತಿ ದೇವರ ದರ್ಶನ ಮಾಡಿದ್ದಾರೆ. ಈ ವೀಡಿಯೋ ಸಕತ್ ವೈರಲ್ ಆಗಿದ್ದು, ಅಭಿಮಾನಿಯ ಅಭಿಮಾನಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Advertisement. Scroll to continue reading.