ಕುಂದಾಪುರ : ರೈಲ್ವೇ ನಿಲ್ದಾಣದಲ್ಲೇ ಟಿಕೆಟ್ ಬುಕಿಂಗ್ ಸೆಂಟರ್ ಸ್ಥಾಪಿಸಲು ಸಚಿವೆ ಶೋಭಾ ಕರಂದ್ಲಾಜೆಯಿಂದ ರೈಲ್ವೇ ಮಂತ್ರಿಗೆ ಪತ್ರ
Published
0
ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಪೋಸ್ಟ್ ಆಫೀಸ್ ಕಚೇರಿಯಲ್ಲಿ ಇರುವ ರೈಲ್ವೇ ಟಿಕೆಟ್ ಬುಕಿಂಗ್ ಸೆಂಟರ್ ( PRS ) ಕೆಟ್ಟು ಹೋಗಿರುವ ಬಗ್ಗೆ ಹಾಗೂ ಪಿ ಆರ್ ಎಸ್ ಸೆಂಟರ್ ಅನ್ನು ಕುಂದಾಪುರದ ರೈಲ್ವೇ ನಿಲ್ದಾಣದಲ್ಲೇ ಸ್ಥಾಪಿಸಬೇಕು ಎಂಬ ಸಾರ್ವಜನಿಕರ ಅಹವಾಲನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸ್ವೀಕರಿಸಿದ್ದು, ಇಂದು ಪೋಸ್ಟ್ ಆಫೀಸ್ ಕಚೇರಿಯಲ್ಲಿರುವ ಟಿಕೆಟ್ ಬುಕಿಂಗ್ ವ್ಯವಸ್ಥೆ (PRS) ಅನ್ನು ದುರಸ್ತಿಗೊಳಿಸಿ ತಕ್ಷಣದಿಂದ ಕಾರ್ಯಾರಂಭ ಆಗುವಂತೆ ಮಾಡಿದ್ದಾರೆ. ಸಾರ್ವಜನಿಕರು ಈ ಸೇವೆಯನ್ನು ಇಂದಿನಿಂದಲೇ ಪಡೆಯಬಹುದು ಹಾಗೂ ಶಾಶ್ವತವಾಗಿ ಪಿ ಆರ್ ಎಸ್ ಸೆಂಟರ್ ಅನ್ನು ರೈಲ್ವೇ ನಿಲ್ದಾಣದಲ್ಲೇ ಸ್ಥಾಪಿಸಲು ಕ್ರಮಕೈಗೊಳ್ಳುವಂತೆ ಕೋರಿ ಕೇಂದ್ರೀಯ ರೈಲ್ವೇ ಮಂತ್ರಿ ಅಶ್ವಿನಿ ಶ್ರೀವಾಸ್ತವ್ ಅವರಿಗೆ ಪತ್ರ ಮುಖೇನ ಅವರು ಕೋರಿದ್ದಾರೆ.