ಕರಾವಳಿ

ಶಿವಪುರ : ಹೊಳೆಯಲ್ಲಿ ಈಜಲು ತೆರಳಿದ್ದ ಮೂವರು ಕಾಲೇಜು ವಿದ್ಯಾರ್ಥಿಗಳು ನೀರುಪಾಲು

0

ವರದಿ : ಶ್ರೀದತ್ತ ಹೆಬ್ರಿ

ಹೆಬ್ರಿ : ಹೊಳೆಗೆ ಈಜಲು ತೆರಳಿದ್ದ ಮೂವರು ಕಾಲೇಜು ವಿದ್ಯಾರ್ಥಿಗಳು ನೀರು ಪಾಲಾದ ದಾರುಣ ಘಟನೆ ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ಮುಳ್ಳುಗುಡ್ಡೆ ಭಟ್ರಾಡಿ ಎಂಬಲ್ಲಿ ಶುಕ್ರವಾರ ನಡೆದಿದೆ. ಹಿರಿಯಡ್ಕದ ಸರಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ 8 ವಿದ್ಯಾರ್ಥಿಗಳು ಕಾಲೇಜಿಗೆ ಹೋಗದೆ ಹೊಳೆಗೆ ಈಜಾಡಲು ತೆರಳಿದ್ದರು. ಅವರಲ್ಲಿ ಮೂವರು ನೀರುಪಾಲಾಗಿದ್ದು ಮೂವರ ಮೃತದೇಹ ಪತ್ತೆಯಾಗಿದೆ. ಮೃತ ವಿದ್ಯಾರ್ಥಿಗಳು ಪೆರ್ಡೂರು ಗ್ರಾಮದ ಪಾಡಿಗಾರರ ಸುದರ್ಶನ್, ಕಿರಣ್ ಹಾಗೂ ಹಿರಿಯಡ್ಕದ ಸೋನಿಷ್ ಎಂದು ಗುರುತಿಸಲಾಗಿದೆ. ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ನಿನ್ನೆ ಗುರುವಾರ ಇದೇ ವಿದ್ಯಾರ್ಥಿಗಳು ಇದೇ ಹೊಳೆಯಲ್ಲಿ ಬಂದು ಸ್ನಾನ ಮಾಡಿ ಹೋಗಿದ್ದಾರೆಂದು ತಿಳಿದು ಬಂದಿದೆ. ಮೃತದೇಹವನ್ನು ಮೇಲಕ್ಕೆತ್ತುವಲ್ಲಿ ಹೆಬ್ರಿ ಚಾರಾ ಗ್ರಾಮದ ಕೆಂಚ, ಶಿವಪುರದ ವಿಜಯ್ ಸೇರಿಗಾರ್ , ಸದಾನಂದ, ಶಿವಪುರ ಕೃಷ್ಣಮೂರ್ತಿ ಶ್ರಮಿಸಿದ್ದರು. ಹೆಬ್ರಿ ತಹಶೀಲ್ದಾರ್ ಪುರಂದರ್ ಕೆ. ಹಾಗೂ ಹೆಬ್ರಿ ಪೋಲಿಸ್ ಠಾಣಾಧಿಕಾರಿ ಮಹೇಶ್ T.M ಹಾಗೂ ಸಿಬ್ಬಂದಿಗಳು ಭೇಟಿ ನೀಡಿದರು. ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಪೊಲೀಸ್ ಅಧಿಕಾರಿಗಳಿಗೆ ಮೃತಪಟ್ಟ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ನೀಡಿದರು.

ಮೃತದೇಹಗಳನ್ನು ಹೆಬ್ರಿ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಿ, ಮರಣೋತ್ತರ ಪರೀಕ್ಷೆ ನಂತರ ಮೃತದೇಹಗಳನ್ನು ಹೆತ್ತವರ ವಶಕ್ಕೆ ನೀಡಲಾಗಿದೆ .ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com