ಬ್ರಹ್ಮಾವರ- ಬಾರಕೂರು – ಜನ್ನಾಡಿ ಜಿಲ್ಲಾ ರಸ್ತೆಯನ್ನು ರಾಜ್ಯ ಹೆದ್ದಾರಿಯಿಂದ ಮತ್ತೆ ಕೆಳದರ್ಜೆಗೆ ತಂದ ಆರೋಪ; ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಬೆಂಬಲಿಸಿ ಸಭೆ
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬ್ರಹ್ಮಾವರ- ಬಾರಕೂರು – ಜನ್ನಾಡಿ ಜಿಲ್ಲಾ ರಸ್ತೆಯನ್ನು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಗಮನಕ್ಕೆ ತರದೆ ರಾಜ್ಯ ರಸ್ತೆಯನ್ನಾಗಿ ಮಾಡಿದುದನ್ನು ಶಾಸಕರು ಸಾರ್ವಜನಿಕ ಹಿತಾಸಕ್ತಿಯಿಂದ ಮೇಲ್ದರ್ಜೆಗೆ ಏರಿದುದನ್ನು ಪುನ ಕೆಳದರ್ಜೆಗೆ ಮಾಡಿದ ಕುರಿತು ಮಾಹಿತಿ ಹಕ್ಕು ಸಂಘಟನೆಯ ಆರೋಪಕ್ಕೆ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಬೆಂಬಲಕ್ಕೆ ಭೂ ಸಂತ್ರಸ್ತರ ಸಭೆ ಸಾೈ ಬರಕಟ್ಟೆ ಬಳಿಯ ಕಾಜ್ರಳ್ಳಿಯಲ್ಲಿ ಶುಕ್ರವಾರ ಜರುಗಿತು.
ನ್ಯಾಯವಾದಿ ಗೌತಮ್ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿ ಸರಕಾರ ಈಗಾಗಲೆ 25 ಮೀಟರ್ ಅಗಲದ ರಸ್ತೆ ಅಭಿವೃದ್ಧಿ ಮಾಡಲಿ. ಬಾರಕೂರಿನಲ್ಲಿರುವ ಪ್ರಾಚ್ಯ ವಸ್ತು ಇಲಾಖೆಗೆ ಒಳಪಟ್ಟ ಅನೇಕ ಜೈನ ಬಸದಿಗಳಿಗೆ, ರಾಷ್ಟ್ರೀಯ ಸ್ಮಾರಕಗಳಿಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಮತ್ತು ಭೂಸ್ವಾಧೀನ ಮಾಡದೆ ಪರಿಹಾರ ನೀಡದೆ ರಾಜ್ಯ ರಸ್ತೆಯನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಜಿಲ್ಲಾ ರಸ್ತೆಯಾಗಿಯೇ ಇರಿಸುವಲ್ಲಿ ರಾಜ್ಯದ ಅನೇಕ ಭಾಗದ ರಸ್ತೆಯ ಕುರಿತು ವಿಧಾನ ಸಭೆಯಲ್ಲಿ ಗಮನ ಸೆಳೆದು ಯಶಸ್ವಿಯಾದ ಹಾಲಾಡಿಯವರ ನಡೆ ಸರಿಯಾಗಿದೆ ಎಂದರು.
ಕುಂದಾಪುರ ನ್ಯಾಯವಾದಿ ಟಿ.ಬಿ ಶೆಟ್ಟಿಯವರು ಸಭೆಯಲ್ಲಿ ಮಾತನಾಡಿ, ಶಾಸಕ ಹಾಲಾಡಿಯವರು ಶಾಸಕಾಂಗ ಮತ್ತು ನ್ಯಾಯಾಂಗಕ್ಕೆ ಬದ್ಧರಾಗಿ ಕೆಲಸ ಮಾಡಿದ್ದಾರೆ. ಸರಕಾರ ಯಾವೂದೇ ಅಭಿವೃದ್ಧಿ ಕಾರ್ಯಗಳನ್ನು ಅಲ್ಲಿಯ ಸಾಧಕ ಬಾಧಕಗಳನ್ನು ಪರಿಶೀಲನೆ ಮಾಡಿ ಅಧಿಸೂಚನೆ ನೀಡಿ ಮಾಡಬೇಕು ಎಂದು 1964 ರಲ್ಲಿ ಮಾಡಿದ ಕಾನೂನಿನ ಪರಿದಿಯಲ್ಲಿದೆ ಎಂದರು.
ರಸ್ತೆ
260 ಕ್ಕೂ ಹೆಚ್ಚು ಭೂ ಸಂತ್ರಸ್ತರು ಸೇರಿದಂತೆ ಸಾರ್ವಜನಿಕರಿಂದ ಜನರಿಂದ ಸ್ಥಳಿಯರಿಂದ ಶಾಸಕರ ಬಗ್ಗೆ ಬಾರಿ ಜನಬೆಂಬಲ ವ್ಯಕ್ತವಾಗಿದೆ.
ಸ್ಥಳಿಯ ನಾನಾ ಭಾಗದ ಗ್ರಾಮ ಪಂಚಾಯತಿ ಅಧ್ಯಕ್ಷ ಬಾರಕೂರು ಶಾಂತಾರಾಮ ಶೆಟ್ಟಿ , ಸುದೀಂದ್ರ ಶೆಟ್ಟಿ , ಲತಾ ಮತ್ತು ಸ್ಥಳೀಯ ಗಣ್ಯರಾದ ಪ್ರದೀಪ್ ಬಲ್ಲಾಳ್ , ನಿರಂಜನ ಹೆಗ್ಡೆ , ರವೀಂದ್ರ ನಾಥ್ ಶೆಟ್ಟಿ , ಇನ್ನಿತರರು ಉಪಸ್ಥಿತರಿದ್ದರು.