ನ್ಯಾಷನಲ್ ಮಾಸ್ಟರ್ಸ್ ಚಾಂಪಿಯನ್ ಶಿಪ್ 2021 ಈಜು ಸ್ಪರ್ಧೆ: ಸಾಲಿಗ್ರಾಮದ ಶ್ರೀಧರ ಉಳಿತ್ತಾಯಗೆ ಬೆಳ್ಳಿ ಪದಕ
Published
2
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಇವರ ಆಶ್ರಯದಲ್ಲಿ ನವೆಂಬರ್ 26, 27, 28 ರಂದು ನಡೆದ 17ನೇ ನ್ಯಾಷನಲ್ ಮಾಸ್ಟರ್ಸ್ ಚಾಂಪಿಯನ್ ಶಿಪ್ 2021 ರ ಈಜು ಸ್ಪರ್ಧೆ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ನಡೆಯಿತು. ರಾಷ್ಟ್ರಮಟ್ಟದ ಈ ಈಜು ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿರುವ ಉಡುಪಿ ಜಿಲ್ಲೆಯ ಸಾಲಿಗ್ರಾಮ ನಿವಾಸಿ ಶ್ರೀಧರ ಉಳಿತ್ತಾಯ ಇವರು 400 ಮೀಟರ್ ಫ್ರೀಸ್ಟೈಲ್ ನಲ್ಲಿ ಭಾಗವಹಿಸಿ ರಜತ(ಬೆಳ್ಳಿ) ಪದಕವನ್ನು ಪಡೆದು ರಾಷ್ಟ್ರಮಟ್ಟದಲ್ಲಿ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿರುತ್ತಾರೆ.
ಇವರು ಉಡುಪಿ ಜಿಲ್ಲೆಯ ಸಾಲಿಗ್ರಾಮ ನಿವಾಸಿಯಾಗಿದ್ದು, ಉಡುಪಿ ಜಿಲ್ಲೆಯ ಬಾರಕೂರು ನ್ಯಾಷನಲ್ ಪದವಿಪೂರ್ವ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಸಾಲಿಗ್ರಾಮ ಸ್ವಿಮ್ಮಿಂಗ್ ಕ್ಲಬ್ಬಿನ ಸದಸ್ಯರಾಗಿರುತ್ತಾರೆ.