ಅಮೇರಿಕಾ: ಅಮೇರಿಕಾದಲ್ಲಿ ಒಮಿಕ್ರಾನ್ ವೈರಸ್ ಮೊಟ್ಟ ಮೊದಲ ಪ್ರಕರಣ ವರದಿಯಾಗಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ಪ್ರಯಾಣಿಕನಲ್ಲಿ ಕೋವಿಡ್ ನ ಹೊಸ ರೂಪಾಂತರವಾದ ಒಮಿಕ್ರಾನ್ ನ ಮೊದಲ ಪ್ರಕರಣ ಕ್ಯಾಲಿಪೋರ್ನಿಯಾದಲ್ಲಿ ಪತ್ತೆಯಾಗಿರುವ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಘೋಷಿಸಿದೆ.
ದಕ್ಷಿಣ ಆಫ್ರಿಕಾ ಮೊದಲ ಪ್ರಕರಣವನ್ನು ವರದಿ ಮಾಡುವ ಮೊದಲು ಯುರೋಪಿನಲ್ಲಿ ಈ ರೂಪಾಂತರವಿತ್ತು ಎಂದು ಹಲವಾರು ವರದಿಗಳು ಹೇಳಿದ್ದವು. ಇದೀಗ ಯುಎಸ್ ನಲ್ಲಿ ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಮೊದಲು ಗುರುತಿಸಿದ ಹೊಸ ರೂಪಾಂತರದ ಮೊದಲ ಪ್ರಕರಣ ಇದೀಗ ಪತ್ತೆಯಾಗಿದೆ.
ಕೊರೋನಾದ ಆತಂಕ ಸ್ವಲ್ಪ ನಿವಾರಣೆಯಾಗುತ್ತಿದೆ ಎಂಬ ಬೆನ್ನಲ್ಲೇ ಒಮಿಕ್ರಾನ್ ಆತಂಕಕ್ಕೆ ತಳ್ಳುತ್ತಿದೆ. ಈಗಾಗಲೇ 18 ದೇಶಗಳಲ್ಲಿ ಒಮಿಕ್ರಾನ್ ಪತ್ತೆಯಾಗಿತ್ತು. ಇದೀಗ ಅಮೆರಿಕಾದಲ್ಲೂ ಪತ್ತೆಯಾಗಿದೆ.
Advertisement. Scroll to continue reading.