ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ನಾಡ ಗೀತೆಗೆ ಗೌರವ ನೀಡಿದ ಹಸುವಿನ ವಿಡಿಯೋ ವೈರಲ್ ಆಗಿದೆ.
ಕುಂದಾಪುರ ತಾಲೂಕು ಬೈಂದೂರು ವಲಯದ ಮಾವಿನಕಟ್ಟೆ ಶಾಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮುಂಜಾನೆ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡುತ್ತಿದ್ದರು.
Advertisement. Scroll to continue reading.
ವಿದ್ಯಾರ್ಥಿಗಳು ಸಾಮೂಹಿಕವಾಗಿ ನಾಡಗೀತೆ ಹಾಡುವಾಗ ಹಸು ಕೂಡಾ ಶಿಸ್ತಿನಲ್ಲಿ ನಿಂತಿದೆ. ನಾಡಗೀತೆ ಮುಗಿಯುವವರೆಗೂ ಹಸು ಕದಲದೆ ನಿಂತಲ್ಲೆ ನಿಂತಿದೆ.
ನಾಡಗೀತೆಗೆ ಹಸು ಪ್ರತಿಕ್ರಿಯಿಸಿದ ವಿಡಿಯೋ ಸದ್ಯ ವೈರಲ್ ಆಗಿದ್ದು, ಹಸುವಿನ ವರ್ತನೆಯ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕುಂದಾಪುರ : ನಾಡ ಗೀತೆಗೆ ಗೌರವ ನೀಡಿದ ಹಸು; ವೀಡಿಯೋ ವೈರಲ್