ಸಾಹಿತ್ಯ

ಸಮಾಜಮುಖಿ ಕೆಲಸಗಳ ಮೂಲಕ ಜನಮನ ಗೆದ್ದಿರುವ ತಾರಾನಾಥ ಶೆಟ್ಟಿ ಬೋಳಾರ್

0

ಆರ್ ಜೆ ಎರಾಲ್

ಸಾಧಿಸುವ ಛಲ ಇರಬೇಕು…ಸಾಧನೆಯೇ ಬದುಕಾಗಬೇಕು…ಈ ನಡುವೆ ಅಹಂಕಾರದ ಬೀಜ ಮೊಳೆತರೆ…! ಅಂತವರು ಮೇಲೇರುವುದಿಲ್ಲ ಬಿಡಿ…ಹಮ್ಮು ಬಿಮ್ಮಿಲ್ಲದೆ ಸಾಗುವ ಜೀವಗಳು ಜನ ಮನ ಗೆಲುವುದರಲ್ಲಿ ಸಂಶಯವಿಲ್ಲ…ಅಂತಹ ವ್ಯಕ್ತಿಗಳಲ್ಲಿ ತಾರಾನಾಥ ಶೆಟ್ಟಿ ಬೋಳಾರ್ ಕೂಡಾ ಒಬ್ಬರು.
ತಾರಾನಾಥ ಶೆಟ್ಟಿ ದೇಹದಾಢ್ಯ ಪಟು. ಫಿಟ್ ನೆಸ್ ಮೂಲಕ ಯುವಕರಿಗೆ ಈಗಲೂ ಸ್ಪೂರ್ತಿ ಆಗಿರುವ ವ್ಯಕ್ತಿ. ಪ್ರತಿದಿನ ವ್ಯಾಯಾಮ, ಸ್ವಿಮ್ಮಿಂಗ್ ಮಾಡುವ ಅವರು ಹದಿಹರೆಯದ ಯುವಕನಂತೆ ಕಾಣಿಸುತ್ತಾರೆ.
ಲಯನ್ಸ್ ಕ್ಲಬ್ ಅಧ್ಯಕ್ಷನಾಗಿ, ಸದಸ್ಯನಾಗಿಯೂ ಸಂಸ್ಥೆ ಜೊತೆ ಸೇರಿ ಅನೇಕ ಕೊಡುಗೆಗಳನ್ನು ನೀಡಿ ಜನಪ್ರಿಯರಾಗಿದ್ದಾರೆ. ತಂಬಾಕು ವಿರೋಧಿ ಅಭಿಯಾನ, ಗಿಡ ನೆಡುವ ಅಭಿಯಾನ, ಆಶ್ರಮಗಳಿಗೆ ಕೊಡುಗೆ ಹೀಗೆ ಹಲವಾರು ಜನಾನುರಾಗಿ ಕೆಲಸಗಳನ್ನು ಮಾಡಿದ್ದಾರೆ.

ಸಮಾಜ ಸೇವೆ :

Advertisement. Scroll to continue reading.


ತಾರಾನಾಥ ಶೆಟ್ಟಿ ಸದಾ ಹಸನ್ಮುಕಿ. ಇವರ ಹೆಸರನ್ನು ಮಂಗಳೂರಿನಲ್ಲಿ ಕೇಳದವರಲೇ ಇಲ್ಲ ಬಿಡಿ. ರಾಜಕೀಯ, ಧಾರ್ಮಿಕ, ಸಿನೆಮಾ, ಸಮಾಜ ಸೇವೆ, ಶಿಕ್ಷಣ, ಲಯನ್ಸ್ ಕ್ಲಬ್, ಕ್ರೀಡೆಯ ಜೊತೆಗೆ ವಿದೇಶಿ ಪ್ರವಾಸ…ಇದು ತಾರಾನಾಥ ಶೆಟ್ಟಿಯವರ ಆಯಾಸ ಪಡದೆ ಸಲ್ಲಿಸುತ್ತಿರುವ ಸೇವೆಗಳು. ಸದಾ ಆರೋಗ್ಯವಾಗಿದ್ದುಕೊಂಡು ಪ್ರತಿಯೊಬ್ಬರಿಗೂ ಸಹಾಯವನ್ನು ಮಾಡುತ್ತಾ ತನ್ನದೇ ಆದ ರೀತಿಯಲ್ಲಿ ಸಮಾಜ ಸೇವೆ ಮಾಡುತ್ತಿರುವ ವ್ಯಕ್ತಿ.
ಬೋಳಾರಿನ ಹಳೆಕೋಟೆ ಮಾರಿಯಮ್ಮ ದೇವಸ್ಥಾನದ ಆಡಳಿತ ಮಂಡಳಿಯ ಮುಖ್ಯಸ್ಥರಾಗಿ ಅನೇಕ ಸಮಾಜಮುಖಿ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿದ ಕೀರ್ತಿ ತಾರಾನಾಥ ಶೆಟ್ಟಿ ಅವರದ್ದು. ಅದ್ದೂರಿ ಮೆರವಣಿಗೆ, ಟ್ಯಾಬ್ಲೋ, ಹುಲಿವೇಷದ ಟ್ಯಾಬ್ಲೋಗಳು ಹೀಗೆ ದೇವಸ್ಥಾನದ ಕಾರ್ಯಕ್ರಮಗಳಿಗೆ ಮೆರುಗು ತುಂಬಿದ್ದಾರೆ ಶೆಟ್ರು.
ತುಳು ಭಾಷೆಯನ್ನು ನಿರರ್ಗಳವಾಗಿ ಮಾತಾನಾಡಬಲ್ಲ ತಾರಾನಾಥ ಶೆಟ್ಟಿ ನಿರೂಪಕರೂ ಹೌದು. ಅವರ ಸ್ಪಷ್ಟ ತುಳು ಭಾಷೆಯ ನಿರೂಪಣೆ ಕೇಳಿದವರೆಲ್ಲಾ ಬೆರಗಾಗೋದು ಸಹಜ.

ಸಿನಿಮಾ ಕ್ಷೇತ್ರದತ್ತ ತಾರಾನಾಥ:

ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಮತ್ತು ಆರಾಧ್ಯ ಶೆಟ್ಟಿ ಅಭಿನಯದ “ನಿಶ್ಯಬ್ದ-2” ಚಿತ್ರ ನೀವೆಲ್ಲಾ ನೋಡಿರ್ತೀರಿ…ಮೆಚ್ಚಿಕೊಂಡಿರ್ತೀರಿ ಕೂಡಾ. ಈ ಚಿತ್ರವನ್ನು ನಿರ್ಮಿಸಿದವರು ಬೇರೆ ಯಾರೂ ಅಲ್ಲ..ನಮ್ಮ ತಾರಾನಾಥ ಶೆಟ್ಟಿ ಅವರೆ. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಅನೇಕ ಭಾಷೆಗಳಿಗೆ ಡಬ್ ಆಗಿತ್ತು. ಅಲ್ಲದೇ, ಈಗಲೂ ಟಿವಿಯಲ್ಲಿ ಪ್ರಸಾರವಾಗಿ ಹೆಚ್ಚಿನ ಟಿ ಆರ್ ಪಿ ಪಡೆಯುತ್ತಿದೆ. ಮುಂದೆಯೂ ಸಿನಿಮಾ ನಿರ್ಮಿಸುವ ಅಭಿಲಾಷೆ ಹೊಂದಿದ್ದಾರೆ ತಾರಾನಾಥ ಶೆಟ್ಟಿ.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ:

Advertisement. Scroll to continue reading.

ತಾರಾನಾಥ ಶೆಟ್ಟಿ ಅವರಿಗೆ ಜಿಲ್ಲೆ, ರಾಜ್ಯ, ದೇಶ, ವಿದೇಶಗಳಲ್ಲಿ ಆತ್ಮೀಯ ಸ್ನೇಹಿತರಿದ್ದಾರೆ. ಪ್ರತಿಯೊಬ್ಬರ ಜೊತೆ ಬೆರೆಯುವ ಸರಳ ವ್ಯಕ್ತಿತ್ವದ ತಾರಾನಾಥ ಶೆಟ್ಟಿ ಎಲ್ಲೇ ಹೋದರೂ ಅವರ ಜೊತೆ ಸ್ನೇಹಕೂಟ ಇರೋದಂತೂ ಪಕ್ಕಾ!
ಅನೇಕ ಸಾಧನೆ ಮಾಡುತ್ತಿದ್ದರೂ ಕಲಿಯುವ ತುಡಿತ ಅವರಲ್ಲಿ ಇರುವುದನ್ನು ಮೆಚ್ಚಲೇಬೇಕು.
ಇವರ ನೇತೃತ್ವದಲ್ಲಿ ದಾಖಲೆಯ ನಿರಂತರ ಭಜನಾ ಕಾರ್ಯಕ್ರಮ ನಡೆದಿದೆ. ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಅಸಹಾಯಕರಿಗೆ ನೆರವಾಗಿದ್ದಾರೆ. ಕ್ರೀಡೆ – ಸಾಂಸ್ಕೃತಿಕ ಸೇವೆಗಳನ್ನು ಜನ ಮರೆತಿಲ್ಲ.
ಇಂತಹ ಅಪೂರ್ವ ವ್ಯಕ್ತಿಗೆ 2021ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲಾಡಳಿತ ಗುರುತಿಸಿ, ಗೌರವಿಸಿದೆ.

ಅನೇಕ ರಾಜಕೀಯ ಪಕ್ಷಗಳು ಚುನಾವಣೆಗೆ ಸ್ಪರ್ಧಿಸಲು ಕರೆ ನೀಡಿದರು ತಾರಾನಾಥ ಶೆಟ್ಟಿ ಅವರು ನಯವಾಗಿ ನಿರಾಕರಿಸುತ್ತಾ ಬಂದಿದ್ದಾರೆ. ಪ್ರತಿಯೊಬ್ಬರೊಂದಿಗೂ ಸೌಹಾರ್ದಯುತವಾಗಿ ಬೆರೆವ, ಭಾವುಕ, ಸ್ನೇಹ ಜೀವಿ ತಾರಾನಾಥ ಶೆಟ್ಟಿ ಅವರಿಂದ ಇನ್ನಷ್ಟು ಸಾಮಾಜಿಕ ಕಾರ್ಯಗಳು ನಡೆಯಲಿ ಎಂದು ಹಾರೈಸೋಣ.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com