ಉಡುಪಿ : ರಾ.ಹೆ. 66 ಕರಾವಳಿ ಬೈಪಾಸ್ ಅಂಡರ್ ಪಾಸ್ ಬಳಿ ರಸ್ತೆ ಹದಗೆಟ್ಟಿದೆ. ಹೊಂಡ ಗುಂಡಿಗಳಿಂದ ತುಂಬಿವೆ. ಹೀಗಾಗಿ ಶೀಘ್ರವೇ ರಸ್ತೆ ದುರಸ್ಥಿಗೆ ಆಗ್ರಹಿಸಿ ಪೋಸ್ಟರ್ ಅಳವಡಿಸಲಾಗಿದೆ.
ಉಡುಪಿ ರಾ.ಹೆ. 66 ಕರಾವಳಿ ಬೈಪಾಸ್ ಅಂಡರ್ ಪಾಸ್ ಬಳಿ ಸರ್ವೀಸ್ ರಸ್ತೆ ಹಲಾವರು ದಿನಗಳಿಂದ ಹದಗೆಟ್ಟಿದ್ದು, ಇದರಿಂದ ವಾಹನ ಸಂಚಾರಕ್ಕೆ ಬಹಳಷ್ಟು ಅನಾನುಕೂಲವಾಗುತ್ತಿದೆ. ದಿನಂಪ್ರತಿ ಅಪಘಾತಗಳು ಹೆಚ್ಚುತ್ತಿವೆ.
ಹೀಗಾಗಿ ಡಿಸೆಂಬರ್ 4 ರೊಳಗೆ ಈ ರಸ್ತೆಯ ಸಮಸ್ಯೆಯನ್ನು ಸಂಬಂಧಪಟ್ಟ ಇಲಾಖೆಯ ಮೂಲಕ ಉಡುಪಿ ಜಿಲ್ಲಾಡಳಿತ ಹಾಗೂ ಚುನಾಯಿತ ಜನಪ್ರತಿನಿಧಿಗಳು ದುರಸ್ತಿ ಮಾಡಿಸದೇ ಇದ್ದಲ್ಲಿ ಡಿ.5 ರಂದು ಜಿಲ್ಲಾಡಳಿತ ಹಾಗೂ ಚುನಾಯಿತ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿ ಶ್ರಮಾದಾನ ಮಾಡುವ ಮೂಲಕ ರಸ್ತೆ ಸಮಸ್ಯೆಯನ್ನು ನಾವೇ ಬಗೆ ಹರಿಸುತ್ತೇವೆ ಎಂದು ಪೋಸ್ಟರ್ ಅಳವಡಿಸಲಾಯಿತು.
ಈ ಸಂದರ್ಭ ಕರವೇ( ಪ್ರವೀಣ್ ಶೆಟ್ಟಿ ಬಣ) ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಅನ್ಸಾರ್ ಅಹ್ಮದ್, ಯುವಶಕ್ತಿ ಕರ್ನಾಟಕದ ರಾಜ್ಯಾಧ್ಯಕ್ಷ ಪ್ರಮೋದ್ ಉಚ್ಚಿಲ ಮೊದಲಾದವರು ಉಪಸ್ಥಿತರಿದ್ದರು.
Advertisement. Scroll to continue reading.