ಹೈದರಾಬಾದ್ : ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕೊನಿಜೆಟಿ ರೋಸಯ್ಯ ಇಂದು ವಿಧಿವಶರಾಗಿದ್ದಾರೆ.
ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ರೋಸಯ್ಯ ಅವರನ್ನು ಹೈದರಾಬಾದ್ ನ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ರೋಸಯ್ಯ ಕಾಂಗ್ರೆಸ್ ನಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು. ಶಾಸಕರಾಗಿ, ಸಂಸದರಾಗಿ ಮುಖ್ಯಮಂತ್ರಿಯಾಗಿ, ತಮಿಳುನಾಡಿನ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದಾರೆ.
Advertisement. Scroll to continue reading.
ಜುಲೈ 4, 1933ರಂದು ಗುಂಟೂರು ಜಿಲ್ಲೆ ವೇಮೂರ್ ಗ್ರಾಮದಲ್ಲಿ ರೋಸಯ್ಯ ಜನಿಸಿದರು. ಗುಂಟೂರು ಹಿಂದೂ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪೂರ್ಣಗೊಳಿಸಿದರು. ಕಾಂಗ್ರೆಸ್ ನಿಂದ 1968, 1974 ಮತ್ತು 1980ರಲ್ಲಿ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿದ್ದರು.
ರೋಸಯ್ಯ ಅವರು ಸೆಪ್ಟೆಂಬರ್ 3, 2009 ರಿಂದ ನವೆಂಬರ್ 24, 2010 ರವರೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಆಗಸ್ಟ್ 31, 2011 ರಂದು ರೋಸಯ್ಯ ಅವರು ತಮಿಳುನಾಡಿನ ರಾಜ್ಯ ರಾಜ್ಯಪಾಲರಾಗಿ, ಆಗಸ್ಟ್ 30, 2016 ರವರೆಗೆ ಸೇವೆ ಸಲ್ಲಿಸಿದರು.
Advertisement. Scroll to continue reading.