ನವದೆಹಲಿ : ಭಾರತದಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾದ ಬೆನ್ನಲ್ಲೇ ಲಸಿಕಾ ಅಭಿಯಾನ ವೇಗ ಪಡೆದುಕೊಂಡಿದೆ. ಶನಿವಾರ ಒಂದೇ ದಿನ 1 ಕೋಟಿ ಲಸಿಕೆ ಡೋಸ್‍ಗಳನ್ನು ನೀಡಲಾಗಿದೆ.
ಈ ಮೂಲಕ ದೇಶದಲ್ಲಿ ಈವರೆಗೆ ಒಟ್ಟು ಲಸಿಕೆಯ ಪ್ರಮಾಣ 127.5 ಕೋಟಿ ಡೋಸ್ ದಾಟಿದೆ.
ಲಸಿಕೆ ಅಭಿಯಾನ ಆರಂಭವಾಗಿದ್ದು, ಇದುವರೆಗೆ 5ನೇ ಸಲ ಒಂದು ದಿನದಲ್ಲಿ 1 ಕೋಟಿಗಿಂತ ಹೆಚ್ಚು ಲಸಿಕೆ ನೀಡಲಾಗಿರುವ ವರದಿಯಾಗಿದೆ. ಈ ಹಿಂದೆ ಆ.27ರಂದು ದೇಶಾದ್ಯಂತ 1 ಕೋಟಿಗಿಂತ ಹೆಚ್ಚು ಡೋಸ್ ನೀಡಲಾಗಿತ್ತು. ಪ್ರಧಾನಿ ಮೋದಿ ಅವರ ಜನ್ಮದಿನದಂದು 2 ಕೋಟಿ ಜನಕ್ಕೆ ಲಸಿಕೆ ನೀಡಲಾಗಿತ್ತು.
Advertisement. Scroll to continue reading.