ಸಿನಿಮಾ

ನನಸಾಯಿತು ಅಪ್ಪು ಕನಸು : ಗಂಧದಗುಡಿಯಲ್ಲಿ ನಾಡಿನ ಘಮ

2

ಚಂದನವನ : ನಟ ಪುನೀತ್ ರಾಜ್ ಕುಮಾರ್ ಅವರ ಕನಸು ” ಗಂಧದ ಗುಡಿ ” ಯ ಟೀಸರ್ ಬಿಡುಗಡೆ ಆಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಅಪ್ಪು ಆಸೆಯಂತೆ ನವೆಂಬರ್ 1 ರಂದು ಟೀಸರ್ ಬಿಡುಗಡೆ ಆಗಬೇಕಿತ್ತು. ಅಪ್ಪು ದೈಹಿಕವಾಗಿ ಅಗಲಿದ ನಂತರ ಅವರ ಪತ್ನಿ ಅಶ್ವಿನಿ ಅಪ್ಪು ಕನಸನ್ನು ನನಸು ಮಾಡಿದ್ದಾರೆ. ಪಾರ್ವತಮ್ಮ ರಾಜ್ ಕುಮಾರ್ ಅವರ ಹುಟ್ಟಿದ ದಿನವಾದ ಇಂದು ‘ಗಂಧದ ಗುಡಿ’ ಅಮೋಘ ಟೀಸರ್ ಬಿಡುಗಡೆ ಮಾಡಲಾಗಿದೆ.

ಪ್ರಕೃತಿ ಸೌಂದರ್ಯದ ಸೊಬಗು :

ಮಲೆನಾಡು, ಉತ್ತರ ಕನ್ನಡ, ಕರಾವಳಿ ಸೇರಿದಂತೆ ಕಡಲ ತೀರಗಳಲ್ಲಿ ಹೀಗೆ ಅಲೆದಾಡಿ ಅಪ್ಪು ಅದ್ಭುತ ಲೋಕವನ್ನೇ ಅನಾವರಣ ಮಾಡಿದ್ದಾರೆ ಈ ಸಾಕ್ಷ್ಯಚಿತ್ರದಲ್ಲಿ. ಪ್ರಕೃತಿ ಸೌಂದರ್ಯವನ್ನು ಮೈ ಮನಕ್ಕೆ ಹಿತ ನೀಡುವಂತೆ ಚಿತ್ರಿಸಲಾಗಿದೆ ಎಂಬುದನ್ನು ಟೈಟಲ್ ಟೀಸರ್ ತೋರಿಸಿದೆ. ನಮ್ಮ ನಾಡಿನ ಘನತೆಯನ್ನು ಸಾಕ್ಷ್ಯಚಿತ್ರದಲ್ಲಿ ಬಿಂಬಿಸಲಾಗಿದೆ. ಕರ್ನಾಟಕದ ಕಾಡು ಮೇಡಿನಲ್ಲಿ ಕರುನಾಡಿನ ಕಂದ ಆನಂದಿಸಿದ ಕ್ಷಣಗಳನ್ನು ಸೆರೆ ಹಿಡಿಯಲಾಗಿದೆ.

Advertisement. Scroll to continue reading.

ಅಪ್ಪು – ಅಮೋಘವರ್ಷ ಕಾಂಬಿನೇಷನ್ :

ಪಿ ಆರ್ ಕೆ ಪ್ರೊಡಕ್ಷನ್ ಹಾಗೂ ಮಡ್ ಸ್ಕಿಪ್ಪರ್ ಮೀಡಿಯಾ ಹೌಸ್ ಜಂಟಿಯಾಗಿ ಸಾಕ್ಷ್ಯಚಿತ್ರವನ್ನು ನಿರ್ಮಿಸಿದೆ. ಅಪ್ಪು ಕನಸಿಗೆ ಜೊತೆಯಾಗಿದ್ದು, ‘ವೈಲ್ಡ್ ಲೈಫ್ ಕರ್ನಾಟಕ’ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಅಮೋಘವರ್ಷ. ವನ್ಯ ಜೀವಿ ಛಾಯಾಗ್ರಾಹಕ ಹಾಗೂ ಸೂಪರ್ ಸ್ಟಾರ್ ಕಾಂಬಿನೇಷನ್ ” ಗಂಧದ ಗುಡಿ “. ಅಂದಹಾಗೆ ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ.

ಬಿಡುಗಡೆ ಯಾವಾಗ?:

ಅಪ್ಪುವನ್ನು ಮತ್ತೆ ತೆರೆಯ ಮೇಲೆ ಕಣ್ತುಂಬಿಕೊಳ್ಳುವ ಆಸೆ ಯಾರಿಗಿಲ್ಲ ಹೇಳಿ? ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರೂ ಪುನೀತ್ ರಾಜ್ ಕುಮಾರ್ ರನ್ನು ನೆಚ್ಚಿಕೊಂಡವರೇ ತಾನೇ..! ಗಂಧದಗುಡಿ ಹೆಸರು ಡಾ. ರಾಜ್ ಕುಮಾರ್ ಅವರನ್ನು ನೆನಪಿಸುತ್ತದೆ. ಇದೀಗ ಅಪ್ಪು ಅದೇ ಹೆಸರಿನೊಂದಿಗೆ ಕರುನಾಡ ಸುಗಂಧದ ಸೊಬಗ ಹಬ್ಬಲಿದ್ದು, 2022 ರಂದು ಚಿತ್ರ ತೆರೆಗೆ ಬರಲಿದೆ. ಮತ್ತೆ ತೆರೆಯ ಮೇಲೆ ಅಪ್ಪುವನ್ನು ಕಾಣಲು ಕಾತುರತೆ ಎಲ್ಲರಲ್ಲೂ ಹೆಚ್ಚಿದ್ದು, ಗಂಧದ ಗುಡಿ ಟೈಟಲ್ ಟೀಸರ್ ಚಿತ್ರದ ಕುರಿತು ಮತ್ತಷ್ಟು ಕುತೂಹಲ ಹುಟ್ಟಿಸಿದೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com