ಮಡಿದ ಯೋಧರಿಗೆ ಪ್ರಧಾನಿ ಮೋದಿ, ರಾಜನಾಥ್ ಸಿಂಗ್ ಅಂತಿಮ ನಮನ
Published
1
ನವದೆಹಲಿ : ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ , ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಜನರು ತಮಿಳುನಾಡಿನ ನೀಲಗಿರಿಯಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಅವರ ಅಂತಿಮ ನಮನ ಸಲ್ಲಿಸಲಾಯಿತು.
ದೆಹಲಿಯ ಪಾಲಂ ವಾಯುನೆಲೆಯಲ್ಲಿ ಮಡಿದ ಸೇನಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಂತಿಮ ಗೌರವ ಸಲ್ಲಿಸಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್, ನೌಕಾಪಡೆ, ವಾಯುಪಡೆ,ಭೂಪಡೆಯ ಮುಖ್ಯಸ್ಥರು ಅಂತಿಮ ನಮನ ಸಲ್ಲಿಸಿದರು.
ನಾಳೆ 4 ಗಂಟೆಗೆ ರಾವತ್ ಅಂತಿಮ ಸಂಸ್ಕಾರ ಸಕಲ ಸೇನಾ ಗೌರವದೊಂದಿಗೆ ನಡೆಯಲಿದೆ.
ಇನ್ನು ಜನರಲ್ ಬಿಪಿನ್ ರಾವತ್ ಅವರ ಅಂತ್ಯಕ್ರಿಯೆಯಲ್ಲಿ ಶ್ರೀಲಂಕಾ ಸೇನಾ ಮುಖ್ಯಸ್ಥ ಮತ್ತು ಸೇನಾ ಕಮಾಂಡರ್ ಜನರಲ್ ಶಾವೆಂದ್ರ ಸಿಲ್ವಾ ಭಾಗವಹಿಸಬಹುದು ಎನ್ನಲಾಗಿದೆ.