ರಾಷ್ಟ್ರೀಯ

ನಾಳೆ ಕಾಶಿ ವಿಶ್ವನಾಥ ಭವ್ಯ ಕಾರಿಡಾರ್ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ

2

ವಾರಾಣಸಿ : ಕಾಶಿ ವಿಶ್ವನಾಥ ದೇವಾಲಯವನ್ನು ಗಂಗಾ ಘಾಟ್ ಗಳಿಗೆ ಸಂಪರ್ಕಿಸುವ ಕಾಶಿ ವಿಶ್ವನಾಥ ಭವ್ಯ ಕಾರಿಡಾರ್ ಉದ್ಘಾಟನೆಯನ್ನ ನಾಳೆ ಪ್ರಧಾನಿ ಮೋದಿ ಮಾಡಲಿದ್ದಾರೆ.

ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ಈ ಯೋಜನೆಯು ಪೂರ್ವಾಂಚಲ ಅಭಿವೃದ್ಧಿ ಕಾರಿಡಾರ್‌ಗೆ ಪೂರಕವಾಗಿದೆ ಮತ್ತು ‘ಕಾಶಿಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಸ್ಕೃತಿಗೆ ಸಂದ ಗೌರವವಾಗಿದೆ’ ಎಂದು ಸರ್ಕಾರ ಹೇಳಿದೆ.

ಕಾಶಿ ವಿಶ್ವನಾಥ ಕಾರಿಡಾರ್ ಅನ್ನು 5,000 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗಿದೆ ಮತ್ತು ಮೂರು ಕಡೆ ಕಟ್ಟಡಗಳಿಂದ ಆವೃತವಾಗಿದ್ದ ದೇವಾಲಯದ ಸಂಕೀರ್ಣದ ದಟ್ಟಣೆಯನ್ನು ಇದು ಕಡಿಮೆ ಮಾಡಿದೆ. ಉದ್ಘಾಟನೆ ಬಳಿಕ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ.

Advertisement. Scroll to continue reading.

51,000 ಎಲ್ ಇ ಡಿ ಪರದೆಗಳಲ್ಲಿ ನೇರ ಪ್ರಸಾರ:

​​ಉದ್ಘಾಟನೆಯ ದಿನ ದೇಶದ 51,000 ಸ್ಥಳಗಳಲ್ಲಿ ದೊಡ್ಡ ಎಲ್‌ಇಡಿ ಪರದೆಯಲ್ಲಿ ‘ದಿವ್ಯ ಕಾಶಿ- ಭವ್ಯ ಕಾಶಿ’ ಹೆಸರಿನಲ್ಲಿ ಕಾರ್ಯಕ್ರಮದ ಲೈವ್‌ ನೀಡಲು ಉದ್ದೇಶಿಸಲಾಗಿದೆ. ಜತೆಗೆ ಪ್ರಮುಖ ದೇಗುಲಗಳು, ಆಶ್ರಮಗಳು, ಧಾರ್ಮಿಕ ಸಂಸ್ಥೆಗಳಲ್ಲಿಯೂ ಎಲ್‌ಇಡಿ ಪರದೆಯಲ್ಲಿ ಕಾರ್ಯಕ್ರಮ ನೇರಪ್ರಸಾರಗೊಳ್ಳಲಿದೆ.

ಉದ್ಘಾಟನೆಯ ದಿನದಂದು ದೇಶದ ಸುಮಾರು 51 ಸಾವಿರ ಸ್ಥಳಗಳಲ್ಲಿ ದೊಡ್ಡ ಎಲ್‌ಇಡಿ ಪರದೆಯಲ್ಲಿ ‘ದಿವ್ಯ ಕಾಶಿ- ಭವ್ಯ ಕಾಶಿ’ ಹೆಸರಿನಲ್ಲಿ ಕಾರ್ಯಕ್ರಮದ ಲೈವ್‌ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿದು ಬಂದಿದೆ. ಮಾತ್ರವಲ್ಲದೆ, ಪ್ರಮುಖ ದೇಗುಲಗಳು, ಆಶ್ರಮಗಳು, ಧಾರ್ಮಿಕ ಸಂಸ್ಥೆಗಳಲ್ಲಿಯೂ ಎಲ್‌ಇಡಿ ಪರದೆಯಲ್ಲಿ ಕಾರ್ಯಕ್ರಮ ನೇರಪ್ರಸಾರಗೊಳ್ಳಲಿದೆ.

ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, 3 ಸಾವಿರಕ್ಕೂ ಹೆಚ್ಚು ಸಾಧು – ಸಂತರು, ಗಣ್ಯರು ಭಾಗವಹಿಸಲಿದ್ದಾರೆ.

Advertisement. Scroll to continue reading.

1000 ಕೋಟಿ ರೂ. ವೆಚ್ಚದ ಯೋಜನೆ:

ದೇಶದ ಪ್ರಸಿದ್ಧ ಮತ್ತು ಪ್ರಾಚೀನ ತೀರ್ಥ ಕ್ಷೇತ್ರ ಕಾಶಿ ವಿಶ್ವನಾಥಕ್ಕೂ ಗಂಗಾ ನದಿಗೂ ನೇರ ಕೊಂಡಿ ನಿರ್ಮಿಸಿರುವ ಈ ಪ್ರಾಜೆಕ್ಟ್‌ಗೆ ಸುಮಾರು 1000 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈಗಾಗಲೇ ಪ್ರಾಜೆಕ್ಟ್‌ನ ಹಂತ – 1 ಕಾಮಗಾರಿ ಪೂರ್ಣಗೊಂಡಿದ್ದು, ಹಂತ – 2ರ ಕೆಲಸ ಕಾರ್ಯಗಳು ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಈ ಯೋಜನೆಯ ಕಾಮಗಾರಿ ಸಮಯದಲ್ಲಿ ದೇಗುಲದ ಸುತ್ತಲಿನ ಕಟ್ಟಡಗಳನ್ನು ಒಡೆದ ಬಳಿಕ 40 ಪುರಾತನ ದೇಗುಲಗಳು ಪತ್ತೆಯಾಗಿದ್ದವು. ಹಲವು ಶತಮಾನಗಳಷ್ಟು ಹಳೆಯದಾದ ಇಂತಹ ಹಲವು ದೇಗುಲಗಳೂ ಸಾರ್ವಜನಿಕರ ದರ್ಶನಕ್ಕೆ ದೊರಕಲಿವೆ.

ಕಾಶಿ ವಿಶ್ವನಾಥ ಧಾಮ ಕಾರಿಡಾರ್‌ ಪ್ರಾಜೆಕ್ಟ್ ಅನ್ನು ದೇಶದ ಪ್ರಮುಖ ವಾಸ್ತುಶಿಲ್ಪಿ ಭಿಮಲ್‌ ಪಾಟೇಲ್‌ ವಿನ್ಯಾಸ ಮಾಡಿದ್ದಾರೆ.

Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com