ಕರಾವಳಿ

ಕೋಟ : ಪಂಚವರ್ಣ ಯುವಕ ಮಂಡಲದ ನೇತ್ರತ್ವದ 100ನೇ ದಿನದ ಸ್ವಚ್ಛತಾ ಅಭಿಯಾನ; ಆಂದೋಲಗಳನ್ನು ಹಮ್ಮಿಕೊಳ್ಳುವುದು ಸುಲಭ ಅದನ್ನು ನಿರಂತರವಾಗಿಸುವುದು ದೊಡ್ಡ ಸಾಧನೆ : ಆನಂದ್ ಸಿ. ಕುಂದರ್

1

ವರದಿ : ದಿನೇಶ್ ರಾಯಪ್ಪನಮಠ

ಕೋಟ: ಒಂದು ಆಂದೋಲ ಪ್ರಾರಂಭ ಮಾಡುವುದು ಸುಲಭ ಆದರೆ ಅದನ್ನು ನಿರಂತರವಾಗಿಸುವುದು ದೊಡ್ಡ ಸಾಧನೆ ಈ ನಿಟ್ಟಿನಲ್ಲಿ ಪಂಚವರ್ಣ ಯುವಕ ಮಂಡಲ ಸೇರಿದಂತೆ ಎಲ್ಲಾ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಹೇಳಿದ್ದಾರೆ

ಪಂಚವರ್ಣ ಯುವಕ ಮಂಡಲ ಕೋಟ ಇವರ ನೇತ್ರತ್ವದಲ್ಲಿ ಗಿಳಿಯಾರು ಯುವಕ ಮಂಡಲ ಗಿಳಿಯಾರು,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಮಣೂರು ಫ್ರೆಂಡ್ಸ್ ಮಣೂರು,ಯಕ್ಷಸೌರಭ ಕಲಾರಂಗ ಕೋಟ,ಮಹಿಳಾ ಬಳಗ ಹಂದಟ್ಟು ಇವರುಗಳ ಸಂಯೋಜನೆಯಲ್ಲಿ ಲಕ್ಷ್ಮೀಸೋಮಬಂಗೇರ ಸರಕಾರಿ ಪ್ರಥಮದರ್ಜೆ ಕಾಲೇಜು ಕೋಟ ಪಡುಕರೆ,ಗೀತಾನಂದ ಫೌಂಡೇಶನ್ ಮಣೂರು,ಕೋಟ ಗ್ರಾಮಪಂಚಾಯತ್, ಕ್ಲಿನ್ ಕುಂದಾಪುರ ಪ್ರೊಜೆಕ್ಟ್ , ಪರಿಸರಸ್ನೇಹಿ ಬಳಗ ಮಟ್ನಕಟ್ಟೆ ಕೆರ್ಗಾಲ್ ಉಪ್ಪುಂದ, ಕ್ಲೀನ್ ತ್ರಾಸಿ ಪ್ರಾಜೆಕ್ಟ್ ಮರವಂತೆ, ಸ್ವಚ್ಛತಾ ಮಾಸತಂಡ ಮರಂತೆ ಇವರುಗಳ ಸಂಯುಕ್ತ ಸಹಯೋಗದೊಂದಿಗೆ ರಾಷ್ಟ್ರೀಯ ಹೆದ್ದಾರಿ ಮಣೂರು ಮೂಲಕ ಕೋಟ ಹಿರೇಮಹಾಲಿಂಗೇಶ್ವರ ದೇವಸ್ಥಾನದ ವರೆಗೆ ಸುಮಾರು 3ವರೆ ಕಿಮೀ ದೂರ ಹಮ್ಮಿಕೊಂಡ ನೂರನೇ ದಿನದ ಪರಿಸರಸ್ನೇಹಿ ಕಾರ್ಯಕ್ರಮದ ಅಂಗವಾಗಿ ಬೃಹತ್ ಸ್ವಚ್ಛತಾ ಅಭಿಯಾನದ ಅಧ್ಯಕ್ಷತೆ ವಹಿಸಿದ್ದರು.

Advertisement. Scroll to continue reading.

ಈ ವೇಳೆ ಅವರು ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಪರಿಸರ ಉಳಿಸುವ ಉದ್ದೇಶ ಅತ್ಯವಶ್ಯಕ, ಏಕೆಂದರೆ ನಮ್ಮ ನಮ್ಮ ಮನೆಗಳಲ್ಲಿ ಉಪಯೋಗಿಸುವ ಪ್ಲಾಸ್ಟಿಕ್ ನಿಂದ ಈ ಪರಿಸರಕ್ಕೆ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಪ್ಲಾಸ್ಟಿಕ್ ನಿರ್ಮೂಲನೆಗೆ ಪ್ರಜ್ಞಾವಂತ ನಾಗರಿಕರ ಸೇವಾ ಕಾರ್ಯ ಬಹುದೊಡ್ಡದು ಇದರ ಜೊತೆಗೆ ಆಯಾ ಭಾಗಗಳ ಪಂಚಾಯತ್‍ಗಳಲ್ಲಿ ಆರಂಭಗೊಳ್ಳುತ್ತಿರುವ ಎಸ್‍ಎಲ್‍ಆರ್‍ಎಮ್ ಘಟಕಗಳ ಪಾತ್ರ ಕೂಡ ಗಣನೀಯವಾದದ್ದು ಈ ಮೂಲಕ ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಸ್ಥಳೀಯಾಡಳಿತ ಹಾಗೂ ಸಂಘಸಂಸ್ಥೆಗಳು ಹಮ್ಮಿಕೊಂಡರೆ ನಮ್ಮೆಲ್ಲರ ಉದ್ದೇಶಗಳು ಈಡೇರಿದಂತೆ ಅದರ ಜೊತೆಗೆ ನೂರು ವಾರಗಳ ಪರಿಸರ ಜಾಗೃತಿ ಕಾರ್ಯಕ್ರಮ ಇನ್ನಷ್ಟು ಸಂಘಟನೆಗಳ ಮೂಲಕ ಆಯಾ ಭಾಗಗಳಲ್ಲಿ ಹೊರಹೊಮ್ಮಲಿ ಎಂದು ಹಾರೈಸಿದರು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪರಿಸರ ಉಳಿಸಿ ಆಂದೋಲನದ ಭಾಗವಾಗಿ ಪರಿಸರ ತಜ್ಞ ಡಾ.ಬಾಲಕೃಷ್ಣ ಮುದ್ದೋಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಿಡ ನೆಟ್ಟು ಮಾತನಾಡಿ, ನಮ್ಮ ವ್ಯವಸ್ಥೆ ಹೇಗೆ ಎಂದರೆ ನಾವು ಹಿಂದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾಕಷ್ಟು ಮರಗಳನ್ನು ಕಂಡಿದ್ದೇವೆ ಅದರಿಂದ ಲಾಭಗಳನ್ನು ಪಡೆದಿದ್ದೇವೆ ಆದರೆ ರಸ್ತೆ ಅಗಲಿಕರಣದ ನೆಪದಲ್ಲಿ ಮರಗಳನ್ನು ನಾಶಮಾಡಲಾಗಿದೆ. ಆದರೆ ಸರಕಾರದ ಸುತ್ತೋಲೆ ಪ್ರಕಾರ ಒಂದು ಮರ ಹಾನಿಗೊಳಿಸಿದರೆ ಮೂರು ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಆಗಬೇಕಿದೆ. ಆದರೆ ಆ ಕೆಲಸ ನಮ್ಮ ಈ ವ್ಯವಸ್ಥೆ ಮಾಡಲಿಲ್ಲ ಬದಲಾಗಿ ಇವತ್ತು ನಾವುಗಳು ನಮ್ಮ ಪ್ರಕೃತಿಯನ್ನು ಬಲಿಕೊಟ್ಟಿದ್ದೇವೆ.ಅದರಿಂದ ದುಷ್ಪರಿಣಾಮ ಎದುರಿಸುತ್ತಿದ್ದೇವೆ ಇದಕ್ಕೆ ನಾವುಗಳೆ ಕಾರಣ ನಮ್ಮ ಪರಿಸರ ಉಳಿಸಿಕೊಳ್ಳವ ಜವಾಬ್ದಾರಿ ನಮ್ಮೆಲರ ಮೇಲಿದೆ ಹೊರತು ಹೊರಗಿವ ವ್ಯವಸ್ಥೆ ಸೃಷ್ಠಿಸುವವರ ಮೇಲಿಲ್ಲ, ನಮ್ಮಲ್ಲಿ ಪ್ರತಿಭಟನಾ ಮನೋಭಾವನೆ ಅಳಿಸಿ ಹೋಗುತ್ತಿವೆ ಇದು ಆಗಬಾರದು ಮುಂದಿನ ದಿನಗಳಲ್ಲಿ ಪರಿಸರ ಸಂರಕ್ಷಿಸುವ ಕೆಲಸ ಈ ಪಂಚವರ್ಣ ಯುವಕ ಮಂಡಲ ಹಾಗೂ ಇನ್ನಿತರ ಸಂಘಟನೆಗಳಂತೆ ಆಗಬೇಕು ಎಂದು ಕರೆ ಇತ್ತರು.

ವಿಶೇಷತೆ :


ಇದೇ ಮೊದಲ ಬಾರಿ ಎಂಬಂತೆ ಕೋಟ ಪರಿಸರದಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ಸುಮಾರು 3.ವರೆ ಕಿಮೀ ಯಷ್ಟು ದೂರ ಕ್ರಮಿಸಿ ಎರಡು ದಿಕ್ಕುಗಳ ರಾಷ್ಟ್ರೀಯ ಹೆದ್ದಾರಿ ಪ್ಲಾಸ್ಟಿಕ್ ಮುಕ್ತ ಪರಿಸರವಾಗಿಸಿದೆ.ಅಲ್ಲದೆ ದೂರದ ತಾಲೂಕು ಬೈಂದೂರಿನ ಉಪ್ಪುಂದದ ಮಟ್ನಕಟ್ಟೆ ಪರಿಸರಸ್ನೇಹಿ ಬಳಗ,ಕ್ಲಿನ್ ತ್ರಾಸಿ ಪ್ರಾಜೆಕ್ಟ್, ಸ್ವಚ್ಛತಾ ಮಾಸ ತಂಡ ಮರವಂತೆ, ಕ್ಲೀನ್ ಕುಂದಾಪುರ ಪಾಲ್ಗೊಂಡಿದ್ದು, ಸ್ವಚ್ಛತಾ ಅಭಿಯಾನಕ್ಕೆ ಮತಷ್ಟು ಮೆರುಗು ಹೆಚ್ಚಿಸಿತು.

ಎನ್‍ಎಸ್‍ಎಸ್ ವಿದ್ಯಾರ್ಥಿ ಪಾಲ್ಗೊಳ್ಳುವಿಕೆ:

Advertisement. Scroll to continue reading.


ಇಲ್ಲಿನ ಸ್ಥಳೀಯ ಕೋಟ ಪಡುಕರೆ ಲಕ್ಷ್ಮೀ ಸೋಮಬಂಗೇರ ಸರಕಾರಿ ಪ್ರಥಮದರ್ಜೆ ಕಾಲೇಜಿನ ಎನ್ ಎಸ್ ಎಸ್ ಘಟಕದ ನೂರಕ್ಕೂ ಅಧಿಕ ವಿದ್ಯಾರ್ಥಿ ಪಾಲ್ಗೊಂಡು ತಾವು ಪರಿಸರ ಉಳಿಸಲು ಸೈ ಎನ್ನಿಸಿಕೊಂಡರು.

Click to comment

You May Also Like

ಕರಾವಳಿ

0 ಬ್ರಹ್ಮಾವರ : ರುಡ್ ಸೆಟ್‌ ಬ್ರಹ್ಮಾವರ ಮತ್ತು ಸ್ಮಾರ್ಟ್‌ ಕ್ರೀಯೇಶನ್ಸ್‌ ಎಜ್ಯುಕೇಶನ್ ಟ್ರಸ್ಟ್ ಹೈಕಾಡಿ ಸಂಸ್ಥೆಯ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೈಕಾಡಿಯಲ್ಲಿ ಮೇಣದಬತ್ತಿ ತಯಾರಿಕಾ ತರಬೇತಿ ಉದ್ಘಾಟನೆಗೊಂಡಿತು. ಆವರ್ಸೆ...

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com