ಬೆಂಗಳೂರು: ವಿಧಾನಪರಿಷತ್ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದ್ದು, 90 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಮತಎಣಿಕೆ ಕಾರ್ಯ ಇದೀಗ ರಾಜ್ಯದ 20 ಜಿಲ್ಲಾ ಕೇಂದ್ರಗಳ ಆರಂಭಗೊಂಡಿದ್ದು, ಮಧ್ಯಾಹ್ನದ ವೇಳೆ ಮತ ಎಣಿಕೆ ಕಾರ್ಯ ಮುಕ್ತಾಯಗೊಳ್ಳಲಿದೆ. ಸಂಜೆ ಫಲಿತಾಂಶ ಹೊರಬೀಳಲಿದೆ.
ವಿಧಾನಪರಿಷತ್ ನಲ್ಲಿ ಬಹುಮತ ಪಡೆಯಲು ಬಿಜೆಪಿ 12 ಸ್ಥಾನಗಳನ್ನು ಗೆಲ್ಲಬೇಕಿದ್ದು, ಪ್ರಸ್ತುತ ಬಿಜೆಪಿಯ 32, ಕಾಂಗ್ರೆಸ್ ನ 29, ಜೆಡಿಎಸ್ ನ 12, ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. 25 ಚುನಾಯಿತ ಸದಸ್ಯರ ಆರು ವರ್ಷಗಳ ಅವಧಿಯು ಜನವರಿ 5, 2022ರಂದು ಕೊನೆಗೊಳ್ಳುವ ಕಾರಣ ವಿಧಾನ ಪರಿಷತ್ನ ಚುನಾವಣೆಯನ್ನು ನಡೆಸಲಾಯಿತು. ಸದಸ್ಯರ ಪೈಕಿ ಬಜೆಪಿಯಿಂದ 66, ಕಾಂಗ್ರೆಸ್ ನಿಂದ 14, ಜೆಡಿಎಸ್ ನಿಂದ 4, ಸ್ವತಂತ್ರ 1 ಸ್ಥಾನಗಳು ತೆರವಾಗಲಿವೆ.
Advertisement. Scroll to continue reading.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಕೊಡಗು, ಮೈಸೂರು, ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು ಮಂಡ್ಯ ಕ್ಷೇತ್ರದಲ್ಲಿನ 25 ಸ್ಥಾನಗಳಿಗೆ ಚುನಾವಣೆ, ವಿಧಾನಪರಿಷತ್ ನ 25 ಸ್ಥಾನಗಳ ಪೈಕಿ ಕಾಂಗ್ರೆಸ್ ನಿಂದ 20, ಬಿಜೆಪಿಯಿಂದ 20 ಹಾಗೂ ಜೆಡಿಎಸ್ ನಿಂದ 6 ಸೇರಿದಂತೆ 90 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.