ಕರಾವಳಿ

ಉಡುಪಿ : ನೇತ್ರದಾನ ವಾಗ್ದಾನ ಘೋಷಣಾ ಕಾರ್ಯಕ್ರಮ

2

ವರದಿ : ದಿನೇಶ್ ರಾಯಪ್ಪನಮಠ

ಉಡುಪಿ: ತಿಂಗಳೆ ಪ್ರತಿಷ್ಠಾನ ಮತ್ತು ಪ್ರಸಾದ್ ನೇತ್ರಾಲಯ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ನಿವಾರಣಾ ವಿಭಾಗ, ಕಾರ್ಲ್ ಜೈಸ್ ಇಂಡಿಯಾ ಸಹಯೋಗದಲ್ಲಿ ನೇತ್ರದಾನ ವಾಗ್ದಾನ ಘೋಷಣಾ ಕಾರ್ಯಕ್ರಮ ಮಂಗಳವಾರ ತಿಂಗಳೆ ಗರಡಿಯಲ್ಲಿ ನಡೆಯಿತು.

ಈ ಸಂದರ್ಭ ಪ್ರಸಾದ್ ನೇತ್ರಾಲಯದ ಡಾ| ಕೃಷ್ಣ ಪ್ರಸಾದ್ ಮಾತನಾಡಿ, ತಿಂಗಳೆ ಪ್ರತಿಷ್ಠಾನವು ಸಾಮಾಜಿಕ, ಧಾರ್ಮಿಕವಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಜನತೆ ಉಪಯೋಗವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ನುಡಿದಂತೆ ನಡೆಯುವ ಗುಣ ತಿಂಗಳೆ ಹೆಗ್ಗಡೆಯವರದ್ದು. ತಾವು ದಂಪತಿ ಸಮೇತರಸಗಿ ನೇತ್ರದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು.

Advertisement. Scroll to continue reading.

ನಾಡ್ಪಾಲು ಗ್ರಾ.ಪಂ ಅಧ್ಯಕ್ಷ ದಿನೇಶ್ ಹೆಗ್ಡೆ, ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ಸಾಮಾಜಿಕ ಧುರೀಣ ನಾಗೇಶ್ ನಾಯ್ಕ್, ಉದ್ಯಮಿ ಕೃಷ್ಣಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ತಿಂಗಳೆ ಪ್ರತಿಷ್ಠಾನ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಸ್ವಾಗತಿಸಿ, ಪ್ರಸ್ತಾವಿಸಿದರು.

೧೨೦ ಜನರು ಉಚಿತ ನೇತ್ರಾ ಶಿಬಿರದ ಉಪಯೋಗ ಪಡೆದರು. ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಮತ್ತು ಅವರ ಧರ್ಮಪತ್ನಿ ಸಿತ್ಮಾ ಹೆಗ್ಗಡೆ, ಯಕ್ಷ ಗುರು ಬನ್ನಂಜೆ ಸಂಜೀವ ಸುವರ್ಣ ದಂಪತಿ, ಉಡುಪಿಯ ಮಾಜಿ ನಗರಸಭಾ ಅಧ್ಯಕ್ಷ ಕಿರಣ್ ಕುಮಾರ್, ಉದ್ಯಮಿ ಕೃಷ್ಣಪ್ರಸಾದ್ ಶೆಟ್ಟಿ ಸೇರಿದಂತೆ ೨೭ ಕ್ಕೂ ಹೆಚ್ಚು ಜನ ನೇತ್ರದಾನದ ವಾಗ್ದಾನ ಮಾಡಿದರು.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com