ಉತ್ತರಕನ್ನಡ: ಚಲಿಸುತ್ತಿದ್ದಂತ ಖಾಸಗಿ ಬಸ್ ನಲ್ಲಿ ಕಾಣಿಸಿ ದಿಢೀರ್ ಬೆಂಕಿ ಕಾಣಿಸಿಕೊಂಡು, ಪ್ರಯಾಣಿಕರು ಅಪಾಯದಿಂದ ಪಾರಾಗಿರುವ ಘಟನೆ ಯಲ್ಲಾಪುರದಲ್ಲಿ ನಡೆದಿದೆ.
ಮುಂಬೈನಿಂದ ಮಂಗಳೂರು ಕಡೆಗೆ ಸಾಗುತ್ತಿದ್ದಂತ ಖಾಸಗಿ ಬಸ್ ರಾ.ಹೆ.63 ರಲ್ಲಿ ಸಂಚರಿಸುತ್ತಿತ್ತು. ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಬಸ್ ನಲ್ಲಿ ತಾಂತ್ರಿಕ ದೋಷದಿಂದ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಎಂಜಿನ್ ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಇಡೀ ಬಸ್ ಗೆ ಆವರಿಸೋ ಮುನ್ನಾ, ಚಾಲಕ ಗಮನಿಸಿದ್ದಾರೆ. ಕೂಡಲೇ ಬಸ್ ನಲ್ಲಿದ್ದಂತ ಪ್ರಯಾಣಿಕರನ್ನು ಕೆಳೆಗೆ ಇಳಿಸಿದ್ದಾರೆ. ಪರಿಣಾಮ, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Advertisement. Scroll to continue reading.
ಸ್ಥಳಕ್ಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಅವರು ಬರುವಷ್ಟರಲ್ಲಿ ಅರ್ಧದಷ್ಟು ಬಸ್ ಸುಟ್ಟು ಭಸ್ಮವಾಗಿತ್ತು. ಚಾಲಕನ ಸಮಯ ಪ್ರಜ್ಞೆಯಿಂದ ಬಸ್ ನಲ್ಲಿದ್ದಂತಹ 24 ಪ್ರಯಾಣಿಕರು ಪ್ರಾಣಾಪಾಯದಿಂದು ಪಾರಾಗಿದ್ದಾರೆ.