ಸಿನಿಮಾ

ಉಡುಪಿಯಲ್ಲಿ ಚಿತ್ರೀಕರಣ ಮುಗಿಸಿ ಬೆಂಗಳೂರಿನತ್ತ ಹೊರಟ ‘ಅರ’ ಚಿತ್ರತಂಡ

4

ವರದಿ : ಬಿ.ಎಸ್. ಆಚಾರ್ಯ

ಬ್ರಹ್ಮಾವರ : ಕಳೆದ ಎರಡು ವರ್ಷದಿಂದ ಬ್ರಹ್ಮಾವರ ಬಳಿಯ ನೀಲಾವರ ಸೇರಿದಂತೆ ಉಡುಪಿಯ ನಾನಾ ಭಾಗದಲ್ಲಿ ಚಿತ್ರೀಕರಣಗೊಂಡು ಕೋವಿಡ್ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕೆ ಮಾಡಲಾಗದೆ, ಸ್ಥಗಿತಗೊಂಡಿದ್ದ ಕನ್ನಡ ಚಿತ್ರ ‘ಅರ’ ಚಿತ್ರೀಕರಣ ಗುರುವಾರ ಮುಕ್ತಾಯಗೊಂಡು ಚಿತ್ರ ತಂಡ ಬೆಂಗಳೂರಿಗೆ ಪ್ಯಾಕಪ್ ಮಾಡಿದೆ.

ಕನ್ನಡದ ಖ್ಯಾತ ನಿರ್ದೇಶಕ ಶಿವಮಣಿ ಸೇರಿದಂತೆ ಅನೇಕರೊಂದಿಗೆ ಚಲನಚಿತ್ರದ ಎಲ್ಲಾ ವಿಭಾಗದಲ್ಲಿ ಕೆಲಸ ಮಾಡಿದ ಮೂಲತ ನೀಲಾವರದ ರೋಹಿತ್ ಅರ ಚಿತ್ರವನ್ನು ನಿರ್ದೇಶಿಸಿ ನಾಯಕ ನಟನಾಗಿದ್ದಾರೆ.

Advertisement. Scroll to continue reading.

ಈ ಸಂದರ್ಭ ನೀಲಾವರ ಗ್ರಾಮ ಪಂಚಾಯತಿ ಸದಸ್ಯ ಗುರುರಾಜ ಮಕ್ಕಿತ್ತಾಯ ಅವರು ಇಲ್ಲಿನ ನೃಸಿಂಹ ಮಠದಲ್ಲಿ ರೋಹಿತ್ ಅವರನ್ನು ಊರ ಜನತೆಯ ಪರವಾಗಿ ಸನ್ಮಾನಿಸಿ ಬೀಳ್ಕೊಟ್ಟಿದ್ದಾರೆ.


ಕುಂಜಾಲು ವಿಶ್ವಕೀರ್ತಿ ಹಿರೀಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪದ್ಯಾಯ ಚಂದ್ರ ಶೆಖರ ಅಡಿಗ, ಉದ್ಯಮಿ ಮಂಜುನಾಥ್ ಶೆಟ್ಟಿಗಾರ್ ಇನ್ನಿತರು ಹಾಜರಿದ್ದರು.
ಕನ್ನಡ, ತೆಲುಗು, ತಮಿಳು ಸೇರಿದಂತೆ ನಾನಾ ಭಾಷೆಯ ಧಾರಾವಾಹಿಯಲ್ಲಿ ನಟಿಸಿದ ಯುವ ನಾಯಕಿ ದೀಪಿಕಾ ಆರಾಧ್ಯ ನಾಯಕಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


ಕ್ಯಾಮರಾ , ಸಂಗೀತ , ಎಡಿಟಿಂಗ್, ಫೈಟ್ ಹೀಗೆ ನಾನಾ ವಿಭಾಗದಲ್ಲೂ ಬಹುತೇಕ ಹೊಸ ಯುವ ತಂತ್ರಜ್ಞರು ಈ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಕರಾವಳಿಯ ಹೊಸ ನಿರ್ದೆಶಕರಾದ ಅನುಪ್ ಭಂಡಾರಿ , ರಿಷಭ್ ಶೆಟ್ಟಿ , ರಾಜ್ ಶೆಟ್ಟಿಯವರಂತೆ ಹೊಸ ಪರಿಕಲ್ಪನೆಯಲ್ಲಿ ಮೂಡಿ ಬಂದ ಚಿತ್ರ ಜನರನ್ನು ಸೆಳೆಯುವ ಕಥೆಯ ಮಾದರಿಯಲ್ಲಿ , ಮೋರ್ಡನ್ ಹೀರೋಗಳಿಗೆ ಇರುವ ಎಲ್ಲಾ ಗುಣ ಲಕ್ಷಣ ಇರುವ ರೋಹಿತ್ ಕೂಡಾ ಕನ್ನಡ ಚಿತ್ರರಂಗದಲ್ಲಿ ಯುವ ನಟ ಕಂಮ್ ನಿರ್ದೇಶಕರಾಗಿ ಮೂಡಿ ಬರಲಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com