ಬ್ರಹ್ಮಾವರ : ಕಾರು ಪಲ್ಟಿ; ಓರ್ವ ಸಾವು, ಮೂವರಿಗೆ ಗಂಭೀರ ಗಾಯ
Published
2
ಬ್ರಹ್ಮಾವರ : ಟೆಲಿಫೋನ್ ಕಂಬಕ್ಕೆ ಡಿಕ್ಕಿ ಹೊಡೆದು, ಕಾರು ಪಲ್ಟಿಯಾಗಿ ಓರ್ವ ಸಾವನ್ನಪ್ಪಿರುವ ಘಟನೆ ಉಜ್ರಬೈಲ್ ನಲ್ಲಿ ನಡೆದಿದೆ.
ಬಾರಕೂರು ಮೂಲಕ ಮಂದಾರ್ತಿಗೆ ಹೋಗುವಾಗ ಉಜ್ರಬೈಲ್ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಎದುರು ಗಡೆಯ ಟೆಲಿಪೋನ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ಓರ್ವ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಹಿಂಬದಿಯಲ್ಲಿ ಕುಳಿತ ಮೂವರಿಗೆ ಗಂಭಿರ ಗಾಯವಾಗಿದೆ.
ಗಾಯಾಳುಗಳನ್ನು ಖಾಸಗಿ ಆಸ್ಪತ್ರೆ ಗೆ ದಾಖಲಿಸಲಾಗಿದೆ. ಬ್ರಹ್ಮಾವರ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement. Scroll to continue reading.
ಇದೊಂದು ತಿರುವಿನಲ್ಲಿ ಅನೇಕ ಅಪಘಾತಗಳು ಸಂಭವಿಸಿದ್ದು, ತಿರುವನ್ನು ಕಡಿಮೆ ಮಾಡಿ ರಸ್ತೆಯನ್ನು ಸ್ವಲ್ಪ ಎತ್ತರಿಸಿದಲ್ಲಿ, ಮುಂದೆ ಸಂಭವಿಸುವ ಅಪಘಾತವನ್ನು ತಪ್ಪಿಸ ಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.