ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್ ಭೀತಿ, ಕೊರೋನಾ ಆತಂಕದ ಹಿನ್ನೆಲೆ ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಮಾಡದಿರಲು ಬ್ರಿಗೇಡ್ ರಸ್ತೆ ಅಸೋಸಿಯೇಷನ್ ನಿರ್ಧರಿಸಿದೆ.
ಈ ಸಂಬಂಧ ಬ್ರಿಗೇಟ್ ರಸ್ತೆ ಅಸೋಸಿಯೇಷನ್ ಕಾರ್ಯದರ್ಶಿ ಸುಹೇಲ್ ಯೂಸುಫ್ ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರ ಹೊಸ ವರ್ಷದ ಆಚರಣೆಗೆ ಅನುಮತಿ ನೀಡಿದರೂ ಕೂಡಾ ಆರೋಗ್ಯದ ದೃಷ್ಠಿಯಿಂದ ಬ್ರಿಗೇಡ್ ರೋಡ್ ನಲ್ಲಿ ನ್ಯೂ ಇಯರ್ ಸಂಭ್ರಮಾಚರಣೆ ಮಾಡದಂತೆ ನಿರ್ಧರಿಸಲಾಗಿದೆ. ಇದು ಸಾರ್ವಜನಿಕರ ದೃಷ್ಠಿಯಿಂದ ಕೈಗೊಂಡ ನಿರ್ಧಾರವಾಗಿದೆ ಎಂದು ತಿಳಿಸಿದ್ದಾರೆ.
ಪ್ರತೀ ವರ್ಷ ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಾಚರಣೆಗಾಗಿ ಡಿಸೆಂಬರ್ 15 ರಿಂದಲೇ ಜಗಮಗಿಸೋ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗುತ್ತಿತ್ತು. ಜನವರಿ 15 ರ ವರೆಗೆ ಒಂದು ತಿಂಗಳ ಕಾಲ ಜಗಮಗಿಸುವಂತೆ ಸಿಂಗಾರಗೊಳಿಸಲಾಗುತ್ತಿತ್ತು. ಆದ್ರೇ ರಾಜ್ಯದಲ್ಲಿ ಓಮಿಕ್ರಾನ್ ಹಾಗೂ ಕೊರೋನಾ ಸೋಂಕಿನ ಭೀತಿಯಿಂದಾಗಿ ಈ ಬಾರಿ ಸರ್ಕಾರ ಅನುಮತಿ ನೀಡಿದರೂ, ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಾಚರಣೆ ಮಾಡುವುದಿಲ್ಲ ಎಂದಿದ್ದಾರೆ.
Advertisement. Scroll to continue reading.