ವರದಿ : ಬಿ.ಎಸ್.ಆಚಾರ್ಯ
ಉಡುಪಿ : ಉಡುಪಿ ಜಿಲ್ಲೆಯ ಅಂಗನವಾಡಿಗಳಿಗೆ ಸಂಜೀವಿನಿ ಚಿಕ್ಕಿ ಸರಬರಾಜು ಕುರಿತಂತೆ ಮಾತುಕತೆ ನಡೆಸಿ ಮಾರುಕಟ್ಟೆ ಉತ್ತೇಜಿಸಲು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ ನವೀನ್ ಭಟ್ ಭರವಸೆ ನೀಡಿದರು.
ಉಡುಪಿ ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಕಾಪು ತಾಲೂಕು ಪಂಚಾಯತ್, ಪಡುಬಿದ್ರಿ ಗ್ರಾಮ ಪಂಚಾಯತ್, ಮಹಾಗಣಪತಿ ಗ್ರಾಪಂ ಮಟ್ಟದ ಒಕ್ಕೂಟ, ಶ್ರೀ ಸುಬ್ರಹ್ಮಣ್ಯ ಸಂಜೀವಿನಿ ಗುಂಪು ಸಹಯೋಗದಲ್ಲಿ ಪಾದೆಬೆಟ್ಟಿನಲ್ಲಿ ನಿರ್ಮಿಸಿರುವ ಸಂಜೀವಿನಿ ಚಿಕ್ಕಿ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಸಹಿತ ವಿವಿಧ ಸಭೆಗಳಲ್ಲಿ ಬಿಸ್ಕತ್ ಬದಲು ಚಿಕ್ಕಿ ಖರೀದಿಸಿ ಉಪಯೋಗಿಸಲು ಕ್ರಮ ವಹಿಸಲಾಗುವುದು. ಗಿರಿಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದ್ದು,ಗಿರಿಜನರು ಕೀಳರಿಮೆ ಬಿಟ್ಟು ಸರ್ಕಾರದ ಯೋಜನೆಗಳ ಮೂಲಕ ಸ್ವಾವಲಂಬಿ ಗಳಾಗಬೇಕು. ಅದಕ್ಕೆ ಬೇಕಾದ ಎಲ್ಲಾ ಸಹಕಾರ ನೀಡಲಾಗುವುದು.
ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಕೊರಗ ಸಮುದಾಯದ ಸಂಘ ಮೂಲಕ ಅಡಕೆ ಹಾಳೆ ತಟ್ಟೆ ನಿರ್ಮಾಣ ಘಟಕ ಕಾರ್ಯಗತವಾಗಲಿದೆ ಎಂದರು.
Advertisement. Scroll to continue reading.
ಘಟಕ ಉದ್ಘಾಟಿಸಿದ ಶಾಸಕ ಲಾಲಾಜಿ ಆರ್ ಮೆಂಡನ್, ಘಟಕ ಸ್ಥಾಪನೆ ಸಣ್ಣ ಪ್ರಯತ್ನವಾದರೂ ಕೊರಗ ಕುಟುಂಬಗಳ ದುಡಿಮೆಗೆ ಅವಕಾಶ ಸೃಷ್ಟಿಯಾಗಿದೆ. ಅದರ ಸದುಪಯೋಗ ಪಡಿಸಿ ಉತ್ತಮರೀತಿಯಲ್ಲಿ ಪರಿವರ್ತನೆ ಹೊಂದುವಂತೆ ಕರೆ ನೀಡಿದರು.
ಚಿಕ್ಕಿ ತಯಾರಿ ತರಬೇತುದಾರ ಗಣೇಶ್ ಅವರನ್ನು ಗೌರವಿಸಲಾಯಿತು.
ಪಡುಬಿದ್ರಿ ಗ್ರಾಪಂ ಅಧ್ಯಕ್ಷ ರವಿ ಶೆಟ್ಟಿ ಪದ್ರ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಾಬು ಎಂ., ಕಾಪು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಸತೀಶ್ ಬಿ.ಎಸ್., ದೂದ್ ಪೀರ್ ಯೋಜನಾ ಸಮಾನವ್ವಯಾಧಿಕಾರಿ ಐ .ಟಿ .ಡಿ .ಪಿ .ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಪೂಜಾರಿ, ಫಿರೋಜ್, ಅಬ್ದುಲ್ ಹುಸೈನ್ , ಶೋಭಾ, ಶಿವಮ್ಮ, ಶಶಿಕಲಾ, ಗೀತಾ, ಗುರುದತ್ ಕಾರ್ಯನಿರ್ವಹಣಾಧಿಕಾರಿ ತಾಲೂಕು ಪಂಚಾಯತ್ ಕಾರ್ಕಳ ಗುರುದತ್, ಜಿಲ್ಲಾ ವ್ಯವಸ್ಥಾಪಕ ಅವಿನಾಶ್, ಜೊನಿಟ ಸಿದ್ದಿ, ಜಯಮಾಲಾ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವಾ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ ನಿರೂಪಿಸಿದರು. ಜಿಲ್ಲಾ ವ್ಯವಸ್ಥಾಪಕಿ ನವ್ಯಾ ವಂದಿಸಿದರು. .