ನವದೆಹಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನವಾದ ಇಂದು ಬಿಜೆಪಿ ವಿಶೇಷ ಸೂಕ್ಷ್ಮ ದೇಣಿಗೆ ಶಿಬಿರವನ್ನ ಪ್ರಾರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಶನಿವಾರ ಬಿಜೆಪಿ ನಿಧಿಗೆ 1000 ರೂ. ದೇಣಿಗೆ ನೀಡಿದ್ದು, ಈ ಬಗ್ಗೆ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
‘ಭಾರತೀಯ ಜನತಾ ಪಕ್ಷದ ಪಕ್ಷದ ನಿಧಿಗೆ ನಾನು 1,000 ರೂ.ಗಳನ್ನು ದೇಣಿಗೆ ಮಾಡಿದ್ದೇನೆ. ದೇಶಕ್ಕೆ ಮೊದಲ ಆದ್ಯತೆ ನೀಡುವುದು ನಮ್ಮ ಅದರ್ಶ. ನೀವು ನೀಡುವ ದೇಣಿಗೆಯಿಂದ ನಿಸ್ವಾರ್ಥ ಸೇವೆ ಬಲಗೊಳ್ಳುತ್ತೆ. ಹಾಗಾಗಿ ಬಿಜೆಪಿಯನ್ನ ಬಲಗೊಳಿಸಲು ಸಹಕರಿಸಿ. ಈ ಮೂಲಕ ಭಾರತವನ್ನ ಬಲಿಷ್ಠಗೊಳಿಸಲು ನೆರವಾಗಿ’ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಮುಖ್ಯಸ್ಥ ಜೆ.ಪಿ. ನಡ್ಡಾ ತಮ್ಮ ಕೊಡುಗೆಯ ಕುರಿತ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Advertisement. Scroll to continue reading.
‘ಬಿಜೆಪಿಗೆ ನೀಡುವ ಯಾವುದೇ ದೇಣಿಗೆಯು ಬಲವಾದ ನವ ಭಾರತಕ್ಕೆ ಕೊಡುಗೆಯಾಗಿದೆ. ನಮೋ ಆಪ್ʼನ ‘ಡೊನೇಷನ್’ ಮಾಡ್ಯೂಲ್ ಮೂಲಕ ನೀವು ಕೊಡುಗೆ ನೀಡಬಹುದು. ನಾನು ನನ್ನ ಪಾತ್ರವನ್ನ ಮಾಡಿದ್ದೇನೆ ಮತ್ತು ಅದಕ್ಕಾಗಿ ನಮ್ಮ ಎಲ್ಲಾ ಬೆಂಬಲಿಗರು ಮತ್ತು ಕಾರ್ಯಕರ್ತರಿಗೆ ದೇಣಿಗೆ ನೀಡಿ ಇತರರಿಗೆ ಸ್ಫೂರ್ತಿ ನೀಡುವಂತೆ ಮನವಿ ಮಾಡುತ್ತೇನೆ’ ಎಂದು ಅಮಿತ್ ಶಾ ಟ್ವೀಟ್ ಮಾಡುವ ಮೂಲಕ ಮನವಿ ಮಾಡಿದ್ದಾರೆ
ಇನ್ನು ಈ ದೇಣಿಗೆ ಕಾರ್ಯಕ್ರಮ ಫೆಬ್ರವರಿ 11ರ ವರೆಗೆ ಮುಂದುವರಿಯಲಿದೆ.
Advertisement. Scroll to continue reading.