ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಬಾರಕೂರು ಹನೆಹಳ್ಳಿ ಕೂರಾಡಿ ಮುಖ್ಯರಸ್ತೆಯಲ್ಲಿ ವೆಲ್ಲಂಕಣಿ ಕಮರ್ಷಿಯಲ್ ಕಾಂಪ್ಲೆಕ್ಸ್ ನ್ನು ಶನಿವಾರ ವೇನಿಟಾ ಡಿ’ಸೋಜಾ ಉದ್ಘಾಟಿಸಿದರು.
ಬ್ರಹ್ಮಾವರ ಹೋಲಿ ಫ್ಯಾಮಿಲಿ ಚರ್ಚ್ನ ಧರ್ಮಗುರು ವಿಕ್ಟರ್ ಫೆರ್ನಾಂಡೀಸ್ ಶುದ್ಧಿಕರಣ ಪೂಜೆ ಮತ್ತು ಪ್ರಾರ್ಥನೆ ಮಾಡಿ ಆರ್ಶೀವಚನ ಮಾಡಿದರು.
Advertisement. Scroll to continue reading.
ಅವರು ಈ ಸಂದರ್ಭ ಮಾತನಾಡಿ, ಕಠಿಣ ಪರಿಶ್ರಮದಿಂದ ಮಾಡುವ ಕೆಲಸಗಳಿಗೆ ದೇವರ ಆಶೀರ್ವಾದ ಇರುತ್ತದೆ.
ಗ್ರಾಮೀಣ ಭಾಗವಾದ ಕೂರಾಡಿಯ ಸ್ವಂತ ಊರಿನಲ್ಲಿ ಕಠಿಣ ಶ್ರಮದಿಂದ ಸಾಧನೆ ಮಾಡಿದ ಕ್ಲೆಮಂತ್ ಡಿಸೋಜ ರವರು ಯುವಜನಾಂಗಕ್ಕೆ ಮಾದರಿ ಎಂದರು.
ಚರ್ಚನ ಸ್ಟ್ಯಾನಿಸ್ ಲೋಪೀಸ್ ನೀಲಾವರ ಗುರಿಕಾರ ವಿವೇಕ್ ಡಿ ಸೋಜ , ಮಾಲಕ ಕ್ಲೆಮಂತ್ ಡಿ, ಸೋಜ ಮತ್ತು ಪತ್ನಿ ಏಸ್ತೇರ್ ಡಿ ಸೋಜ ಇನ್ನಿತರು ಹಾಜರಿದ್ದರು.
ಹಲವಾರು ಮಂದಿ ಗಣ್ಯರು ಆಗಮಿಸಿ ನೂತನ ಸಂಸ್ಥೆಗೆ ಶುಭಹಾರೈಸಿದರು.