ನವದೆಹಲಿ : ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರುದ್ದ ಹೋರಾಡಿದ್ದ ಡೆಸ್ಮಂಡ್ ಟುಟು ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಆರ್ಚ್ ಬಿಷಪ್ ಎಮೆರಿಟಸ್ ಡೆಸ್ಮಂಡ್ ಟುಟು ಜಾಗತಿಕವಾಗಿ ಅಸಂಖ್ಯಾತ ಜನರಿಗೆ ಮಾರ್ಗದರ್ಶಕ ಬೆಳಕು. ಮಾನವ ಘನತೆ ಮತ್ತು ಸಮಾನತೆಗೆ ಅವರ ಒತ್ತು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಅವರ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ ಮತ್ತು ಅವರ ಎಲ್ಲಾ ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಅವರ ಆತ್ಮಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.
ದಣಿವರಿಯದ ಕಾರ್ಯಕರ್ತರಾಗಿದ್ದ ಡೆಸ್ಮಂಡ್ ಟುಟು, ತಮ್ಮ ದೇಶದಲ್ಲಿ ಬಿಳಿ ಅಲ್ಪಸಂಖ್ಯಾತರ ಆಳ್ವಿಕೆಯನ್ನು ಎದುರಿಸಿದಕ್ಕಾಗಿ, 1984 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದಿದ್ದರುಮ
Advertisement. Scroll to continue reading.