ಉಡುಪಿ : ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮ ಫಲಕ(7ನೇ ಮನೆ) “ಹೊಂಬೆಳಕು” ಅನಾವರಣ ಕಾರ್ಯಕ್ರಮ ಶನಿವಾರ ನಡೆಯಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ 4ವರ್ಷ ಜೈಲುವಾಸ ಅನುಭವಿಸಿದ್ದ ಹಣತೆ ಪಾರಂಪಳ್ಳಿ ದಿವಂಗತ. ಜನಾರ್ದನ ಮಧ್ಯಸ್ಥರ ನೂತನ ಮನೆಯ ನಾಮಫಲಕದ ಅನಾವರಣವನ್ನು ವಕೀಲ, ಪತ್ರಕರ್ತ ಎ.ಎಸ್.ಹೆಬ್ಬಾರ್ ನೆರವೇರಿಸಿದರು.
ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಎಸ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಿ. ಜನಾರ್ದನ ಮಧ್ಯಸ್ಥರ ಒಡನಾಡಿ ಹೆಚ್. ಶ್ರೀಧರ ಹಂದೆ ದೀಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಪತ್ರಕರ್ತ ಜಾನ್ ಡಿಸೋಜಾ
ಪ್ರದೀಪ್ ಗೌಡ, ಸುಧಾಕರ ಮಧ್ಯಸ್ಥ ಮೊದಲಾದವರು ಉಪಸ್ಥಿತಿತರಿದ್ದರು.
Advertisement. Scroll to continue reading.