ನ್ಯೂಯಾರ್ಕ್:ಯುನೈಟೆಡ್ ಸ್ಟೇಟ್ಸ್(US)ನಲ್ಲಿ ಕಳೆದ 24 ಗಂಟೆಗಳಲ್ಲಿ 512,000 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ.ಇದು 2020 ರಲ್ಲಿ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಅತಿ ಹೆಚ್ಚು ಏಕದಿನ ಏರಿಕೆಯಾಗಿದ್ದು, ಒಟ್ಟು ಪ್ರಕರಣಗಳು 54 ಮಿಲಿಯನ್ ಮೀರಿದೆ.
ಕಳೆದ 24 ಗಂಟೆಗಳಲ್ಲಿ 1,762 ರೋಗಿಗಳು covid -19 ನಿಂದ ಸಾವನ್ನಪ್ಪಿದ್ದಾರೆ. ಒಟ್ಟು ಸಾವು 842,000 ಕ್ಕೆ ಏರಿದೆ ಎನ್ನಲಾಗಿದೆ. US ನಲ್ಲಿ ಸಕ್ರಿಯ ಪ್ರಕರಣಗಳು ಮತ್ತು ಚೇತರಿಕೆ ಕ್ರಮವಾಗಿ 11,981,273 ಮತ್ತು 41,325,110 ಇವೆ.
ದೇಶದಲ್ಲಿ omicron ಪ್ರಕರಣಗಳೂ ಕೂಡ ಹೆಚ್ಚುತ್ತಿವೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಪ್ರಕಾರ, ಯುಎಸ್‌ನಲ್ಲಿ ಚಲಾವಣೆಯಲ್ಲಿರುವ COVID -19 ರೂಪಾಂತರಗಳಲ್ಲಿ ಒಮಿಕ್ರಾನ್ 58.6% ಎಂದು ಅಂದಾಜಿಸಲಾಗಿದೆ. ಮತ್ತೊಂದೆಡೆ, ಈ ವರ್ಷದ ಆರಂಭದಲ್ಲಿ COVID -19 ಸ್ಪೈಕ್‌ಗೆ ಮುಖ್ಯ ಕಾರಣವಾದ DELTA ರೂಪಾಂತರವು ಈಗ ದೇಶದ ಎಲ್ಲಾ ಪ್ರಕರಣಗಳಲ್ಲಿ 41.1% ನಷ್ಟಿದೆ.
Advertisement. Scroll to continue reading.
ಪ್ರಸ್ತುತ ಕೋವಿಡ್ -19 ನಿಂದ ಹೆಚ್ಚು ಹಾನಿಗೊಳಗಾದ ರಾಜ್ಯಗಳಲ್ಲಿ ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್ ಸೇರಿವೆ ಎಂದು ತಿಳಿದು ಬಂದಿದೆ.