ಬ್ರಹ್ಮಾವರ : ಡ್ರಮ್ ಕಾಂಪೋಸ್ಟ್ ಹಾಗೂ ಪೌಷ್ಟಿಕ ತೋಟ ತಯಾರಿ ತರಬೇತಿ ಕಾರ್ಯಕ್ರಮ
Published
2
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬ್ರಹ್ಮಾವರ, ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಕಾಡೂರು ಶ್ರೀದಾಕ್ಷಾಯಿಣಿ ಜ್ಞಾನ ವಿಕಾಸ ಕೇಂದ್ರದಲ್ಲಿ ಜ್ಞಾನ ವಿಕಾಸದ ಸೃಜನಶೀಲ ಕಾರ್ಯಕ್ರಮದಡಿ ಡ್ರಮ್ ಕಾಂಪೋಸ್ಟ್ ತಯಾರಿ ಹಾಗೂ ಪೌಷ್ಟಿಕ ತೋಟ ತಯಾರಿ ಕಾರ್ಯಕ್ರಮವನ್ನು ಒಕ್ಕೂಟದ ಅಧ್ಯಕ್ಷರಾದ ಜಯಂತಿರವರ ಮನೆಯಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಧನಂಜಯ್ ಅವರು ಉದ್ಘಾಟಿಸಿ, ಪೌಷ್ಟಿಕ ತೋಟದಲ್ಲಿ ಯಾವ ಯಾವ ರೀತಿಯ ತರಕಾರಿ ಹಣ್ಣುಗಳನ್ನು ಬೆಳೆಸಬೇಕು. ಯಾವ ಹಣ್ಣು ಮತ್ತು ತರಕಾರಿಗಳಲ್ಲಿ ಎಷ್ಟು ಪೌಷ್ಟಿಕಾಂಶ ಇರುತ್ತದೆ. ಅದನ್ನು ಯಾವ ರೀತಿಯಾಗಿ ನಾಟಿಮಾಡಬೇಕು ಮತ್ತು ಬೆಳೆಸಬೇಕು ಎಂಬುದರ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿಯನ್ನು ನೀಡಿದರು.
Advertisement. Scroll to continue reading.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಟಿಪ್ಸ್ ಸಂಸ್ಥೆಯ ಮುಖ್ಯ ಮೇಲ್ವಿಚಾರಕಿಯಾದ ವಿಜಯಲಕ್ಷ್ಮಿ ಡ್ರಮ್ ಕಾಂಪೋಸ್ಟ್ ತಯಾರಿಕೆ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಜಯಂತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೇಂದ್ರದ ಎಲ್ಲಾ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ವೀಣಾ, ಸೇವಾಪ್ರತಿನಿಧಿ ಸಂತೋಷ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಬ್ರಹ್ಮಾವರ ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ನೇತ್ರಾವತಿ ನಿರೂಪಿಸಿ, ಕೇಂದ್ರದ ಸದಸ್ಯರಾದ ಗೀತಾರವರು ಸ್ವಾಗತಿಸಿ, ಅಶ್ವಿನಿಯವರು ವಂದಿಸಿದರು.