ಪುಣೆಯಲ್ಲಿ ನಡೆದ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧಾ ಕೂಟದಲ್ಲಿ ಉಡುಪಿಯ ಅಮೃತಾಗೆ ಚಿನ್ನದ ಪದಕ
Published
2
ವರದಿ : ಬಿ.ಎಸ್.ಆಚಾರ್ಯ
ಉಡುಪಿ : ಮಹಾರಾಷ್ಟ್ರದ ಪುಣೆಯಲ್ಲಿ ಡಿಸೆಂಬರ್ 21 ರಿಂದ 25 ವರೆಗೆ ನಡೆದ ಕಿರಿಯರ ವಿಭಾಗದ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧಾ ಕೂಟದಲ್ಲಿ ಉಡುಪಿ ಜಿಲ್ಲಾ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್ ಇದರ ವಿದ್ಯಾರ್ಥಿನಿ ಅಮೃತ ಕ್ರಿಯೇಟಿವ್ ಫಾರ್ಮ್ಸ್ ಟೀಮ್ ವಿತ್ ವೆಪನ್ ಜೂನಿಯರ್ ವಿಭಾಗ ಹಾಗೂ ಕ್ರಿಯೇಟಿವ್ ಫಾರ್ಮ್ಸ್ ವಿತ್ ವೆಪನ್ ಜೂನಿಯರ್ ಈ ಎರಡು ವಿಭಾಗಗಳಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿದ್ದಾರೆ.
ಈ ಮೂಲಕ ರಾಷ್ಟ್ರ ಮಟ್ಟದಲ್ಲಿ ಜಿಲ್ಲೆಯ ಕೀರ್ತಿಯನ್ನು ಮೆರೆದಿದ್ದಾರೆ. ಜ್ಯೋತಿ ಅಚ್ಚುತ ರವರ ಪುತ್ರಿ. ಇವರು ಉಡುಪಿ ಜಿಲ್ಲಾ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್ ಇದರ ಅಧ್ಯಕ್ಷರಾಗಿರುವ ವಾಮನ್ ಪಾಲನ್ ಇವರ ಬಳಿ ತರಬೇತಿಯನ್ನು ಪಡೆಯುತ್ತಿದ್ದು, ಬ್ರಹ್ಮಾವರದ ಚಾಂತರಿನಲ್ಲಿ ಕರಾಟೆ ತರಗತಿಯನ್ನು ನೀಡುತ್ತಿದ್ದಾರೆ.