ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಯುವಕರು ಹೆಚ್ಚಾಗಿ ಕ್ರೀಡೆಯಲ್ಲಿ ತೊಡಗಿಸಿಕೊಂಡಲ್ಲಿ ತಮ್ಮ ಪ್ರತಿಭೆಯನ್ನು ಹೆಚ್ಚು ಹೆಚ್ಚಾಗಿ ತೋರ್ಪಡಿಸಿಕೊಳ್ಳಬಹುದಾಗಿದೆ ಎಂದು
ರಾಷ್ಟ್ರ ಮಟ್ಟದ ವಾಲಿಬಾಲ್ ಆಟಗಾರ ಸುದೀಪ್ ಶೆಟ್ಟಿ ಮಲ್ಯಾಡಿ ಹೇಳಿದರು.
ಅವರು ಎಚ್.ಕೆ. ಫ್ರೆಂಡ್ಸ್ ಇವರ ಆಶ್ರಯದಲ್ಲಿ ಉಳ್ತೂರು ಗ್ರಾಮದ ಹಲ್ತೂರು ಕಳ್ಳಿಗುಡ್ಡೆಯಲ್ಲಿ ಜರುಗಿದ ಅಪ್ಪು ಟ್ರೋಫಿ 2021 ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
Advertisement. Scroll to continue reading.
ದಲಿತ ಸಂಘಟನೆಯ ಮುಖಂಡ ರಾಜು ಬೆಟ್ಟಿನ ಮನೆ ಅಧ್ಯಕ್ಷತೆ ವಹಿಸಿದ್ದರು. ಎಚ್.ಕೆ. ಫ್ರೆಂಡ್ಸ್ ಸಂಘಟಕರಾದ ಗಣಪತಿ, ಉಮೇಶ್, ಆನಂದ ಮತ್ತಿತರರು ಉಪಸ್ಥಿತರಿದ್ದರು.
ಪ್ರಥಮ ಬಹುಮಾನವನ್ನು 8 ಸ್ಟಾರ್ ತೆಂಕಬೆಟ್ಟು ವಕ್ವಾಡಿ ಎ, ದ್ವಿತೀಯ ಬಹುಮಾನವನ್ನು ಎಚ್‍ಎಮ್‍ಟಿ ಪ್ರೆಂಡ್ಸ್ ಕೋಣಿ ಮತ್ತು ತೃತೀಯ ಬಹುಮಾನವನ್ನು ಫೀಲ್ಡ್ ಗಾಯ್ಸ್ ರವರು ಪಡೆದುಕೊಂಡರು.