19 ವರ್ಷಗಳಿಂದ ಉಚಿತ ಮಾನಸಿಕ ಚಿಕಿತ್ಸೆ ಮತ್ತು ಔಷಧಿ ನೀಡಿ ಮಾದರಿಯಾಗಿದೆ ಬ್ರಹ್ಮಾವರ ರೋಟರಿ ಸಂಸ್ಥೆ
Published
2
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ದೇಹದ ಅನಾರೋಗ್ಯಕ್ಕೆ ಹಲವಾರು ಹೆಲ್ತ್ ಕಾರ್ಡ್ ಗಳು ಹಾಗೂ ಸರಕಾರದ ಆಯುಷ್ಮಾನ್ ಕಾರ್ಡ್ ಮೂಲಕ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದು. ಆದರೆ ಮನೋ ರೋಗಕ್ಕೆ ಮಾತ್ರ ಯಾವೂದೇ ಯೋಜನೆ ಸಿಗುವುದಿಲ್ಲ. ಆದರೆ ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಬ್ರಹ್ಮಾವರ ರೋಟರಿಯವರು ಕಳೆದ 19 ವರ್ಷದಿಂದ ಉಚಿತವಾಗಿ ಮಾನಸಿಕ ಚಿಕಿತ್ಸೆ ಮತ್ತು ಔಷಧಿಯನ್ನು ನೀಡಿ ಮಾದರಿ ಸಂಸ್ಥೆಯಾಗಿದೆ.
ಬ್ರಹ್ಮಾವರ ನಗರ ಮಧ್ಯಭಾಗದಲ್ಲಿ ಸ್ವಂತವಾಗಿ ರೋಟರಿ ಭವನವನ್ನು ನಿರ್ಮಿಸಿಕೊಂಡ 50 ವರ್ಷದ ಬ್ರಹ್ಮಾವರ ರೋಟರಿ ಸಂಸ್ಥೆ ಇಲ್ಲಿನ ಸೇವಾ ಮನೋಭಾವದವರ ವಿನೂತನ ಯೋಜನೆ ಇದಾಗಿದೆ.
19 ವರ್ಷದ ಹಿಂದೆ ವಾಲ್ಟರ್ ಸಿರಿಲ್ ಪಿಂಟೋ ಅವರು ಅಧ್ಯಕ್ಷರಾಗಿದ್ದಾಗ ಹಿರಿಯ ರೋಟರಿ ಸಭಾಪತಿ ಭಾಸ್ಕರ್ ರೈ ಮಾರ್ಗದರ್ಶನದಲ್ಲಿ ಮತ್ತು ಖ್ಯಾತ ಮನೋವೈದ್ಯರಾದ ಡಾ , ಪಿ.ವಿ ಭಂಡಾರಿಯವರಿಂದ ಶಿಬಿರವನ್ನು ಆರಂಭಿಸಿದ್ದು, ಪ್ರತೀ ತಿಂಗಳ ಮೊದಲ ಬುಧವಾರ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ 222 ನೇ ಮಾನಸಿಕ ಶಿಬಿರವಾಗಿದೆ.
ಪ್ರತೀ ತಿಂಗಳು ನಾನಾ ಭಾಗದಿಂದ 400 ಜನಕ್ಕಿಂತ ಹೆಚ್ಚು ಮಂದಿ ಮುಂಜಾನೆಯೇ ಬಂದು ಚಿಕಿತ್ಸೆಗೆ ಕಾದು ಕುಳಿತಿರುತ್ತಾರೆ.
ಪ್ರತಿಯೊಂದು ಶಿಬಿರಕ್ಕೆ ರೋಟರಿ ಅಧ್ಯಕ್ಷರು, ಸದಸ್ಯರು ಮತ್ತು ನಾನಾ ಧಾನಿಗಳ ನೆರವಿನಿಂದ ನಡೆಯುತ್ತದೆ. ತಪಾಸಣೆ ಮತ್ತು ಚಿಕಿತ್ಸೆಯನ್ನು ಡಾ ಪಿ.ವಿ.ಭಂಡಾರಿಯವರ ವೈದ್ಯಕೀಯ ತಂಡ ಸೇವಾ ಮನೋಭಾವದಿಂದ ನೀಡಿದರೆ, ತಿಂಗಳೊಂದರ 70 ,000 ಸಾವಿರ ರೂ. ವೆಚ್ಚವನ್ನು ರೋಟರಿ ಸಂಸ್ಥೆ ಭರಿಸುತ್ತಿದೆ. ಈ ತನಕ ಉಚಿತವಾಗಿ ಸಹಸ್ರಾರು ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು , ಕೆಲವರು ಮಾತ್ರ 19 ವರ್ಷದಿಂದ ಖಾಯಂ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement. Scroll to continue reading.
ಡಾ ಪಿ.ವಿ.ಭಂಡಾರಿ
ಇಂದು ನಡೆದ ಶಿಬಿರದ ವೆಚ್ಚವನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಭರಿಸಿದ್ದಾರೆ. ರೋಟರಿ ಅಧ್ಯಕ್ಷ ಹರೀಶ್ ಕುಂದರ್ ಅವರ ಜೊತೆ ರೋಟರಿ ಕಾರ್ಯದರ್ಶಿ ಸತೀಶ್ ಶೆಟ್ಟಿ , ಏ.ಬಿ ಶೆಟ್ಟಿ, ಉದಯಕುಮಾರ್ ಶೆಟ್ಟಿ , ಅರುಣ್ ಕುಮಾರ್ ಶೆಟ್ಟಿ , ಗಣೇಶ್ ಉಪಾದ್ಯ ಸೇರಿದಂತೆ ಪ್ರತೀ ಶಿಬಿರಕ್ಕೆ ಸದಸ್ಯರೇ ಇಲ್ಲಿನ ಅಚ್ಚು ಕಟ್ಟಿನ ವ್ಯವಸ್ಥೆಗೊಳಿಸುತ್ತಾರೆ. ಒಟ್ಟಾರೆಯಾಗಿ ಬ್ರಹ್ಮಾವರ ರೋಟರಿ ಸಂಸ್ಥೆ ಸಮಾಜದ ಜನರ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಮಾದರಿಯಾಗಿದೆ.