ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಕುಂಜಾಲು ಸಮೀಪ ಇವತ್ತು ಮುಂಜಾನೆ 3.45 ಕ್ಕೆ ಗೋ ಕಳ್ಳರು 1 ಕಾರಿನಲ್ಲಿ ಬಂದು 1 ದನವನ್ನು ಕಾರಿಗೆ ತುಂಬಿಸಿ ತೆಗೆದುಕೊಂಡು ಹೋದರು ಎಂಬ ಮಾಹಿತಿಯನ್ನು ಸ್ಥಳೀಯರು ಸಂಘಟನೆಗೆ ನೀಡಿದ್ದು ಮಾಹಿತಿ ಸಿಕ್ಕ ಕೂಡಲೇ ವಿಶ್ವ ಹಿಂದು ಪರಿಷದ್ ಬಜರಂಗದಳ ಬ್ರಹ್ಮಾವರ ಪ್ರಖಂಡದ ಅಧ್ಯಕ್ಷ ರಾಘವೇಂದ್ರ ಕುಂದರ್ ಜೆ.ಬಿ, ಶಶಿಕಾಂತ್ ಕುಂಜಾಲು, ರಾಘವೇಂದ್ರ ( ರೂಪಾ ಬಾಟ್ಲಿಂಗ್ ) ಕೊಳಂಬೆ, ಜಯ ( ಕೋಟಿ ) ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಚರ್ಚೆ ನಡೆಸಿದರು.
ಬ್ರಹ್ಮಾವರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಗುರುನಾಥ್ ಬಿ ಹಾದಿಮನಿ ಅವರಿಗೆ ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಾಹಿತಿ ನೀಡಿದರು. ಇದಕ್ಕೆ ಸ್ಪಂದಿಸಿದ ಗುರುನಾಥ್ ಬಿ ಹಾದಿಮನಿ ಅವರು ಕೂಡಲೇ ಸಿಬ್ಬಂದಿ ಅವರನ್ನು ಸ್ಥಳಕ್ಕೆ ಕಳುಹಿಸಿ ಕ್ರಮಕ್ಕೆ ಸೂಚಿಸಿದರು.
Advertisement. Scroll to continue reading.