ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಅಯ್ಯಪ್ಪ ಸ್ವಾಮಿ ದೇವಸ್ಥಾನದ 42ನೇ ವರ್ಷದ ಧಾರ್ಮಿಕ ಉತ್ಸವ ಅಂಗವಾಗಿ ಜನವರಿ 8 ರಂದು ನಡೆಯಬೇಕಾಗಿದ್ದ ಧಾರ್ಮಿಕ ಕಾರ್ಯಕ್ರಮಗಳು ಕೋವಿಡ್ ಮಾರ್ಗ ಸೂಚಿ ಅನ್ವಯ ಶುಕ್ರವಾರ ಜರುಗಿತು.
ವೇದ ಮೂರ್ತಿ ನಾಯರ್ ಬೆಟ್ಟು ರಮೇಶ್ ಭಟ್ ಇವರಿಂದ ಬೆಳಿಗ್ಗೆ ನವ ಕಲಶ ಹಾಗೂ ಪ್ರತಿಷ್ಠಾ ಪೂಜೆ ಜರುಗಿತು.
ಮಧ್ಯಾಹ್ನ ಪರಿಸರದ 5000 ಮಂದಿ ಅನ್ನ ಪ್ರಸಾದ ಸೇವೆಯಲ್ಲಿ ಭಾಗಿಯಾಗಿದ್ದರು.
ಪರಿಸರದ 5 ಶಾಲೆಯ ವಿದ್ಯಾರ್ಥಿಗಳಿಗೆ ಇಲ್ಲಿನ ಅನ್ನ ಪ್ರಸಾದವನ್ನು ಶಾಲೆಗೆ ಕಳುಹಿಸಲಾಯಿತು.
ಶೇಷ ಗುರುಸ್ವಾಮಿ , ಅಯ್ಯಪ್ಪ ಭಕ್ತ ಸಮಿತಿಯ ಸಂತೋಷ ಹಂದಾಡಿ , ವಿಜಯನಾಯರಿ, ಶಬರಿ ಗಣೇಶ್ , ಶೇಖರ ದೇವಾಡಿಗ , ಗೋಪಾಲ್ ದೇವಾಡಿಗ ನೇತೃತ್ವ ವಹಿಸಿದ್ದರು.
Advertisement. Scroll to continue reading.