ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೊರೊನಾ ಸ್ಪೋಟವಾಗಿದೆ. ಇಂದು ಹೊಸದಾಗಿ 8,906 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಕುರಿತು ಟ್ವೀಟ್ ಮೂಲಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ 24 ಗಂಟೆಯಲ್ಲಿ 1,64,261 ಜನರನ್ನ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ.
ಇವರಲ್ಲಿ ಬೆಂಗಳೂರಿನಲ್ಲಿ 7,113 ಸೇರಿದಂತೆ ರಾಜ್ಯಾದ್ಯಾಂತ 8,906 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ.
Advertisement. Scroll to continue reading.
ಇಂದು ಕರ್ನಾಟಕದಲ್ಲಿ ಪ್ರಕರಣಗಳು ಅಲ್ಪ ಪ್ರಮಾಣದಲ್ಲಿ ಹೆಚ್ಚುತ್ತಿವೆ..!
- ರಾಜ್ಯದಲ್ಲಿ ಹೊಸ ಪ್ರಕರಣಗಳು: 8,906
- ಬೆಂಗಳೂರಿನಲ್ಲಿ ಹೊಸ ಪ್ರಕರಣಗಳು : 7,113
- ರಾಜ್ಯದಲ್ಲಿ ಧನಾತ್ಮಕತೆಯ ದರ: 5.42%
- ಡಿಸ್ಚಾರ್ಜ್ʼಗಳು: 508
- ಸಕ್ರಿಯ ಪ್ರಕರಣಗಳು ರಾಜ್ಯ: 38,507 (ಬೆಂಗಳೂರು- 32ಸಾವಿರ)
- ಸಾವುಗಳು:04 (ಬೆಂಗಳೂರು- 03)
- ಟೆಸ್ಟ್: 1,64,261
ಬೆಂಗಳೂರಿನಲ್ಲಿ ಅತ್ಯಧಿಕ ಕೇಸ್:
ಬೆಂಗಳೂರಿನಲ್ಲಿ ಇಂದು 7,113 ಪ್ರಕರಣಗಳು ದಾಖಲಾಗುವುದರೊಂದಿಗೆ ಪರೀಕ್ಷೆಯ ಧನಾತ್ಮಕತೆಯ ದರವು ಬೆಂಗಳೂರಿನಲ್ಲಿ 10% ದಾಟಿದೆ. ಕರ್ನಾಟಕದಲ್ಲಿ 79% ಪ್ರಕರಣಗಳೊಂದಿಗೆ ಬೆಂಗಳೂರು ಕೋವಿಡ್‌ನ ಕೇಂದ್ರಬಿಂದುವಾಗಿದೆ ಎಂದು ತಿಳಿಸಿದ್ದಾರೆ.
Advertisement. Scroll to continue reading.