ಬ್ರಹ್ಮಾವರ ಕುಲಾಲ ಸಂಘ : ವಾರ್ಷಿಕ ಮಹಾಸಭೆ, ಸತ್ಯನಾರಾಯಣ ಪೂಜೆ
Published
2
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕುಲಾಲ ಸಮಾಜ ಸೇವಾ ಸಂಘ(ರಿ.) ಬ್ರಹ್ಮಾವರ ಇವರ ವಾರ್ಷಿಕ ಮಹಾಸಭೆ, ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಸಂಘದ ಅಧ್ಯಕ್ಷ ರಾಜೀವ ಕುಲಾಲ್ ಆರೂರು ಇವರ ಅಧ್ಯಕ್ಷತೆಯಲ್ಲಿ ಸಂಘದ ಕಛೇರಿಯಲ್ಲಿ ಇತ್ತೀಚೆಗೆ ನಡೆಯಿತು.
ಸಂಘದ ಕಾರ್ಯಾಧ್ಯಕ್ಷ ಬಸವರಾಜ್ ಕುಲಾಲ್ ಬ್ರಹ್ಮಾವರ ಸ್ವಾಗತಿಸಿ ಪ್ರಾಸ್ತಾವಿಕ ಮಾತಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಲಾಲ್ ಕುಂಜಾಲ್ ವರದಿ ಮಂಡಿಸಿದರು. ಸಭೆಯಲ್ಲಿ ಸಂಘದ ಗೌರವ ಅಧ್ಯಕ್ಷ ಮಂಜುನಾಥ ಕುಲಾಲ್ ಕೀರ್ತಿನಗರ, ಉಪಾಧ್ಯಕ್ಷ ವಿಜಯ ಕುಲಾಲ್ ಕುಂಜಾಲ್, ಗೌರವ ಸಲಹೆಗಾರ ಸುಧಾಕರ ಕುಲಾಲ್, ಕನ್ನಾರ್ ನರಸಿಂಹ ಕುಲಾಲ್ ಸಂತೆಕಟ್ಟೆ, ಹಿರಿಯ ಮಾರ್ಗದರ್ಶಕ ಕೋಟಿ ಕುಲಾಲ್, ಮುದ್ದೂರು ಶಂಕರ ಕುಲಾಲ್ ಸಾಸ್ತಾನ ಉಪಸ್ಥಿತರಿದ್ದರು.
ಸಂಘದ ಕೋಶಾಧಿಕಾರಿ ವಿಶ್ವನಾಥ ಕುಲಾಲ್ ಸಾಸ್ತಾನ ಲೆಕ್ಕಪತ್ರ ಮಂಡಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.