ಹಿಮಾಚಲ ಪ್ರದೇಶ: ಶಿಮ್ಲಾ ಜಿಲ್ಲೆಯ ಕುಪ್ವಿಯಲ್ಲಿ ಭೀಕರ ಹಿಮಪಾತವಾಗಿದೆ. ಪರಿಣಾಮ ಕಾರೊಂದು ಆಳವಾದ ಕಂದಕಕ್ಕೆ ಉರುಳಿ ಬಿದ್ದಿದ್ದು, ಒಂದೇ ಕುಟುಂಬದ ಐವರು ಅಸುನೀಗಿದ್ದಾರೆ. ಇದರಲ್ಲಿ ಓರ್ವ ಮಗುವಿನ ಪ್ರಾಣ ರಕ್ಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸೋಮವಾರ ಶಿಮ್ಲಾದ ಚೋಪಾಲ್ನ ಕುಪ್ವಿ ಪ್ರದೇಶದಲ್ಲಿ ಕುಟುಂಬವೊಂದು ಕಾರಿನಲ್ಲಿ ಪ್ರಯಾಣಿಸುತ್ತಿತ್ತು. ಈ ವೇಳೆ ಕಮರಿಗೆ ಉರುಳಿದೆ. ಪರಿಣಾಮ ಐವರು ಸಾವನ್ನಪ್ಪಿದ್ದಾರೆ.
ಸಾವನ್ನಪ್ಪಿದವರಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಹಾಗೂ ಒಂದು ಮಗು ಸೇರಿದೆ.
Advertisement. Scroll to continue reading.