ಬ್ರಹ್ಮಾವರ : ಸ್ವಾಮಿ ಕೊರಗಜ್ಜ ದೈವಕ್ಕೆ ಅಪಮಾನ; ತಪ್ಪಿತಸ್ಥರಿಗೆ ಶಿಕ್ಷೆಯಾಗಲೆಂದು ಮೂವತ್ತಕ್ಕೂ ಹೆಚ್ಚಿನ ದೇವಸ್ಥಾನಗಳಲ್ಲಿ ವಿಹಿಂಪ, ಬಜರಂಗದಳದಿಂದ ಪ್ರಾರ್ಥನೆ
Published
1
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ವಿಟ್ಲದಲ್ಲಿ ಮುಸ್ಲಿಂ ಸಮುದಾಯದಿಂದ ಹಿಂದೂ ಸಮಾಜಕ್ಕೆ ಹಾಗೂ ಸ್ವಾಮಿ ಕೊರಗಜ್ಜನಿಗೆ ಆದ ಅಪಮಾನವನ್ನು ಖಂಡಿಸಿ ಮಂಗಳವಾರ ಒಂದೇ ದಿನದಲ್ಲಿ ಮೂವತ್ತಕ್ಕೂ ಮಿಕ್ಕಿ ದೇವಸ್ಥಾನಗಳಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಬ್ರಹ್ಮಾವರ ಪ್ರಖಂಡದ ಅಧ್ಯಕ್ಷ ರಾಘವೇಂದ್ರ ಕುಂದರ್ ಜೆ.ಬಿ ಯವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಮೂಲಕ ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆ ಆಗಬೇಕೆಂದು ದೇವರಲ್ಲಿ ಪ್ರಾರ್ಥಿಸಲಾಯಿತು.
Advertisement. Scroll to continue reading.
ಈ ಸಂಕಲ್ಪದಲ್ಲಿ ಭರತ್ ಬಿರ್ತಿ, ಶಶಿಕಾಂತ್ ಕುಂಜಾಲು , ನಿತ್ಯಾನಂದ ಪೂಜಾರಿ ಚಾಂತಾರು, ಸುಹಾಸ್ , ಶಶಿಧರ್ ಪೂಜಾರಿ ಬಿರ್ತಿ, ಸುಂದರ್ ಪೂಜಾರಿ, ಪ್ರವೀಣ್ ದೇವಾಡಿಗ , ರಮೇಶ್ ಪೂಜಾರಿ ನೀಲಾವರ, ಜಯ (ಕೋಟಿ )ಪೂಜಾರಿ, ರೂಪ ಬಾಟ್ಲಿಂಗ್ ಕೊಳಂಬೆಯ ರಾಘವೇಂದ್ರ, ಚಾಂತಾರು ಘಟಕದ ಅಧ್ಯಕ್ಷ ಸುಶಾಂತ್ , ಉಮೇಶ್ ನಾಯ್ಕ್ , ಸತೀಶ್ ಕಡೋಳಿ, ಕುಂಜಾಲು ಘಟಕದ ಅಧ್ಯಕ್ಷ ಕಿರಣ ಕುಮಾರ್ ಶೆಟ್ಟಿ , ಸುರೇಶ್ ಎ. ಕುಲಾಲ್ , ಸತೀಶ್ ಪೂಜಾರಿ ಕುಂಜಾಲು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.