ಕರಾವಳಿ

ಅಶಕ್ತ ವಿದ್ಯಾರ್ಥಿಗೆ ಕೋಟ ಮೂರ್ತೆದಾರರ ಸಹಕಾರಿ ಸಂಘ ರೂ.25,000 ಸಹಾಯಧನ ವಿತರಣೆ

1

ವರದಿ : ದಿನೇಶ್ ರಾಯಪ್ಪನಮಠ

ಕೋಟ: ಕೋಟ ಮೂರ್ತೆದಾರರ ಸಹಕಾರಿ ಸಂಘದ ವತಿಯಿಂದ ಸಂಘದ ಸದಸ್ಯರಾದ ಸಾಸ್ತಾನ ಗುಂಡ್ಮಿಯ ಗುಲಾಬಿ ಪೂಜಾರ್ತಿರವರ ಮಗ ಸಾಸ್ತಾನದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಕೈಕಾಲು ಮೂಳೆ ಮುರಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿ ಕಿಶನ್‍ರವರಿಗೆ ಸಂಘದ ಸದಸ್ಯರ ಸಹಾಯಕ ನಿಧಿಯಿಂದ ಚಿಕಿತ್ಸೆಗಾಗಿ ರೂ. 25000 ಮೊತ್ತದ ಚೆಕ್‍ನ್ನು ಸಂಘದ ಅಧ್ಯಕ್ಷ ಕೆ. ಕೊರಗ ಪೂಜಾರಿ ಗುಂಡ್ಮಿಯ ಸಂತ್ರಸ್ತ ಬಾಲಕನ ಮೆನೆಗೆ ತೆರಳಿ ವಿತರಿಸಿದರು.


ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಕೊರಗಪ್ಪ ಸುವರ್ಣ, ಜಿ. ಸಂಜೀವ ಪೂಜಾರಿ, ಸಂಘದ ಪ್ರಧಾನ ವ್ಯವಸ್ಥಾಪಕ ಜಗದೀಶ್ ಕೆಮ್ಮಣ್ಣು, ಸಾಸ್ತಾನ ಶಾಖೆಯ ವ್ಯವಸ್ಥಾಪಕರಾದ ರಮೇಶ್ ಪೂಜಾರಿ ಬಾರ್ಕೂರು ಉಪಸ್ಥಿತರಿದ್ದರು.

Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com