ರಾಮನಗರ: ಸಿಎಂ ಮನವಿ, ಕಾಂಗ್ರೆಸ್ ಹೈಕಮಾಂಡ್ ಖಡಕ್ ಸೂಚನೆ, ಹೈಕೋರ್ಟ್ ಗರಂ ಸೇರಿದಂತೆ ವಿವಿಧ ಕಾರಣದಿಂದಾಗಿ ಕಾಂಗ್ರೆಸ್ ನಡೆಸುತ್ತಿರುವಂತ ಮೇಕೆದಾಟು ಪಾದಯಾತ್ರೆಯನ್ನು ನಿಲ್ಲಿಸುವ ನಿರ್ಧಾರವನ್ನು ಕಾಂಗ್ರೆಸ್ ಕೈಗೊಂಡಿದೆ.
ಇಂದು ಮೇಕೆದಾಟು ಸಂಬಂಧ ಕಾಂಗ್ರೆಸ್ ನಡೆಸುತ್ತಿರುವಂತ ಪಾದಯಾತ್ರೆಯು ರಾಮನಗರಕ್ಕೆ ಬಂದು ತಲುಪಿತ್ತು.
ಇಂದು ರಾಮನಗರದ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರು ಸಭೆ ನಡೆಸಿದರು. ಈ ಸಭೆಯಲ್ಲಿ ಬೃಹತ್ ಮಟ್ಟದ ಜನರು ಸೇರದೇ ಮೂರು ನಾಲ್ಕು ಜನರು ಸೇರಿ ಪಾದಯಾತ್ರೆ ಮುಂದುರೆಸುವ ಬಗ್ಗೆ ಮಾತುಗಳನ್ನು ನಾಯಕರು ತಿಳಿಸಿದ್ದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಪಕ್ಷಕ್ಕೆ ಧಕ್ಕೆಯಾಗದಂತೆ ನಿರ್ಧಾರ ಕೈಗೊಳ್ಳುವಂತೆ ಸೂಚನೆ ನೀಡಿತ್ತು ಎನ್ನಲಾಗಿದೆ.
Advertisement. Scroll to continue reading.
ಹೀಗಾಗಿ ಇಂದು ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ತಾತ್ಕಾಲಿಕ ಸ್ಥಗಿತಗೊಳಿಸಿದೆ.
ಕೊರೋನಾ ಕಡಿಮೆ ಆದ ಬಳಿಕ, ಮುಂದಿನ ದಿನಗಳಲ್ಲಿ ಎಲ್ಲಿಗೆ ಪಾದಯಾತ್ರೆ ಮೊಟಕುಗೊಳಿಸಲಾಗಿತ್ತೋ ಅಲ್ಲಿಂದಲೇ ಪುನರಾರಂಭಿಸುವ ತೀರ್ಮಾನದೊಂದಿಗೆ, ಮೇಕೆದಾಟು ಪಾದಯಾತ್ರೆಯನ್ನು ನಿಲ್ಲಿಸುವ ನಿರ್ಧಾರವನ್ನು ಕಾಂಗ್ರೆಸ್ ನಾಯಕರು ಕೈಗೊಂಡಿದ್ದಾರೆ.
Advertisement. Scroll to continue reading.