ಬ್ರಹ್ಮಾವರ: ಬಾಂಧವ್ಯ ಬ್ಲಡ್ ಕರ್ನಾಟಕ ಸಹಾಯ ಯೋಜನೆಯಡಿಯಲ್ಲಿ ಮಟಪಾಡಿ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು. ಈ ವೇಳೆ ತೆರೆಮರೆಯಲ್ಲಿ ಬಡಜನರ ಸೇವೆ ಮಾಡಿರುವ ಮಟಪಾಡಿ ಮಂಜುನಾಥ ಭಂಡಾರಿಯವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಾಂಧವ್ಯ ಬ್ಲಡ್ ಕರ್ನಾಟಕ ರೂವಾರಿ ದಿನೇಶ್ ಬಾಂಧವ್ಯ, ಪಿಕ್ಸಲ್ ಆರ್ಟಿಸ್ಟ್ ಮಹೇಶ್ ಪೂಜಾರಿ, ರಂಗಭೂಮಿ ಕಲಾವಿದೆ ಶಿಲ್ಪಾ ಶೆಟ್ಟಿ, ಆರ್ ಜೆ ಸ್ಫೂರ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೆ.ಲೀಲಾವತಿ, ಮಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ್ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯ ಶೇಖರ್ ಪೂಜಾರಿ, ಅಶೋಕ್, ಶಾಲಾ ಮುಖ್ಯೋಪಾಧ್ಯಾಯ ಸುಧಾಕರ್ ಶೆಟ್ಟಿ, ಶೈನಾ ಮೊನಿಸ್, ಸ್ಟಿವನ್ ಮಟಪಾಡಿ, ಅಂಗನವಾಡಿ ಶಿಕ್ಷಕಿ ಶಾರದಾ, ಸಹಾಯಕಿ ಸರೋಜ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು
Advertisement. Scroll to continue reading.