ಕಿನ್ನಿಮುಲ್ಕಿ : ಶ್ರೀಅಯ್ಯಪ್ಪ ಸ್ವಾಮಿಯ 40ನೇ ವರ್ಷದ ಪಡಿಪೂಜೆ
Published
3
ಉಡುಪಿ : ಕಿನ್ನಿಮುಲ್ಕಿ ಪರಿಸರದ ಮತ್ತು ಉಡುಪಿಯ ಅಯ್ಯಪ್ಪ ಸ್ವಾಮಿ ಭಕ್ತ ವೃಂದದ 40ನೇ ವರ್ಷದ ಅಯ್ಯಪ್ಪ ಸ್ವಾಮಿಯ ಪಡಿಪೂಜೆ ಹಾಗೂ ಮಹಾಪೂಜೆಯು ಮಕರ ಸಂಕ್ರಾಂತಿಯಂದು ಗುರುರಾಜ ಆಚಾರ್ಯ ರ ಪೌರೋಹಿತ್ಯದಲ್ಲಿ ಕಿನ್ನಿಮುಲ್ಕಿಯಲ್ಲಿರುವ ದಿವಂಗತ ಗುರುರಾಜ್ ಭಟ್ ಅವರ ಮನೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಮಾಜಸೇವಕ ಶ್ರೀಕೃಷ್ಣಮೂರ್ತಿ ಆಚಾರ್ಯ, ನಗರಸಭಾ ಸದಸ್ಯೆ ಶ್ರೀಮತಿ ಅಮೃತಾ ಕೃಷ್ಣಮೂರ್ತಿ, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು, ಮಾರುತಿ ವೀಥೀಕಾದ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಗುರುರಾಜ್ ಎಮ್ ಶೆಟ್ಟಿ ,ನೇಜಾರು ಸುಧಾಕರ ಪೂಜಾರಿ, ಭಾಸ್ಕರ ಮೆಂಡನ್, ಕಿಶನ್ ಸುವರ್ಣ, ಪ್ರಭಾಕರ್ ನಾಯಕ್, ಗಣೇಶ್ ರಾಜ್, ಸರಳೇಬೆಟ್ಟು ರವಿ ಭಂಡಾರಿ, ಕವನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.