ವರದಿ : ದಿನೇಶ್ ರಾಯಪ್ಪನಮಠ
ಕೋಟ: ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿ ಬೆಂಗ್ರೆಯಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿ ನೂತನವಾಗಿ ನಿರ್ಮಿಸುವ ನೀರಿನ ಟ್ಯಾಂಕ್ಗೆ ಇತ್ತೀಚಿಗೆ ಶಂಕು ಸ್ಥಾಪನೆಯನ್ನು ಗ್ರಾ ಪಂ. ಅಧ್ಯಕ್ಷ ಪ್ರಭಾಕರ ಮೆಂಡನ್ ನೇರವೇರಿಸಿದರು.
ಬಳಿಕ ಅವರು ಮಾತನಾಡಿ, ಕೋಡಿಬೆಂಗ್ರೆಯ ಜನತೆಯ ಬಹುವರ್ಷದ ಕನಸು ನನಸಾಗುತ್ತಿದೆ ಹಾಗೂ ಕೆಮ್ಮಣ್ಣಿನಿಂದ ಹೊಪ್ ಪೈಪ್ ಮುಖಾಂತರ ನೀರು ಸರಬರಾಜು ಮಾಡಲು ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
Advertisement. Scroll to continue reading.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಮಾತನಾಡಿ ಒಂದು ಕೋಟಿ ಮೊತ್ತದ ಯೋಜನೆಯಾಗಿದ್ದು, ಪ್ರತಿ ಮನೆಗೆ ಕಾರ್ಯಾತ್ಮಕ ನಳ್ಳಿ ಸಂಪರ್ಕ ನೀಡಲಾಗುವುದು ಹಾಗೂ ಸಮುದಾಯ ವಂತಿಗೆಯ ಅಗತ್ಯತೆ ಬಗ್ಗೆ ವಿವರಿಸಿದರು.
ಪಂಚಾಯತ್ ರಾಜ್ ಕಿರಿಯ ಇಂಜಿನಿಯರ್ ಮೋಹನ್ ನಾಯ್ಕ್, ಗ್ರಾ ಪಂ. ಸದಸ್ಯ ವಿನಯ್ ಅಮೀನ್, ಪ್ರಸಾದ್ , ಕುಮಾರಿ ರಶ್ಮಿತಾ, ಕುಸುಮ, ಗುತ್ತಿಗೆದಾರರಾದ ಜಯ ಕುಮಾರ್, ಪ್ರಶಾಂತ್, ಗಣೇಶ್, ಸ್ಥಳೀಯ ನಾಗರಾಜ ಕುಂದರ್, ಮನೋಹರ್ ಕುಂದರ್, ದುರ್ಗಾಪರಮೇಶ್ವರಿ ದೇವಸ್ಥಾನ ಅಧ್ಯಕ್ಷ ಜಯ ಎಸ್ ಕುಂದರ್, ಕೆ.ಎಫ್. ಡಿ.ಸಿ. ನಿರ್ದೇಶಕ ಸಂದೀಪ್ ಕುಂದರ್ , ರಾಘವೇಂದ್ರ ಸುವರ್ಣ , ಕೋಡಿ, ಸಿಬ್ಬಂದಿ ಜಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Advertisement. Scroll to continue reading.