ಎರಡನೇ ವಾರದ ವೀಕೆಂಡ್ ಕರ್ಫ್ಯೂ : ಉಡುಪಿ ನಗರ ಭಾಗದಲ್ಲಿ ವಾಹನ, ಜನಸಂಚಾರ ವಿರಳ
Published
1
ಉಡುಪಿ : ಕೋವಿಡ್ ಹಾಗೂ ಒಮಿಕ್ರಾನ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಶುಕ್ರವಾರ ರಾತ್ರಿಯಿಂದ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಲಾಗಿದೆ. ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿದೆ.
ಆದರೆ, ಜಿಲ್ಲೆಯಾದ್ಯಂತ ವೀಕೆಂಡ್ ಕರ್ಫ್ಯೂಗೆ ಆಕ್ರೋಶ ಕೇಳಿ ಬಂದಿತ್ತು. ಆದರೂ ಕರ್ಫ್ಯೂ ತೆಗೆದು ಹಾಕಲಾಗಿಲ್ಲ. ಒಂದೆಡೆ ಪರ್ಯಾಯ ಸಂಭ್ರಮ ಮನೆ ಮಾಡಿದ್ದರೆ, ಇನ್ನೊಂದೆಡೆ ಎರಡನೇ ವಾರದ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ.
ಬಸ್ ಸಂಚಾರ ವಿರಳವಾಗಿದೆ. ಸಿಟಿ ಬಸ್, ಸರ್ವೀಸ್ ಬಸ್ , ಕೆ ಎಸ್ ಆರ್ ಟಿ ಸಿ ಬಸ್ ಗಳ ಸಂಚಾರವಿದ್ದು, ವಿರಳವಾಗಿದೆ. ಜನಸಂಚಾರವೂ ಕಡಿಮೆ ಸಂಖ್ಯೆಯಲ್ಲಿದೆ. ಇನ್ನು ರಿಕ್ಷಾ, ಟ್ಯಾಕ್ಸಿ ಸಂಚಾರವಿದೆ.
ಹೂ- ಹಣ್ಣು, ದಿನಸಿ, ಸೂಪರ್ ಮಾರ್ಕೆಟ್ ಗಳು, ಕೆಲವೊಂದು ತುರ್ತು ಸೇವೆಗಳನ್ನು ಹೊರತು ಪಡಿಸಿ, ಆಭರಣ ಮಳಿಗೆಗಳು, ಬಟ್ಟೆ, ಅಂಗಡಿಗಳು ಮೊದಲಾದವು ಮುಚ್ಚಿವೆ. ಜಿಲ್ಲೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.