ವರದಿ : ದಿನೇಶ್ ರಾಯಪ್ಪನಮಠ
ಕೋಟ: ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ ಕೋಟ ಇವರ ವತಿಯಿಂದ ಶಬರಿಮಲೆ ಮಕರಜ್ಯೋತಿ ಹಿನ್ನಲೆಯಲ್ಲಿ ಕೋಟ ಮಹತೋಭಾರ ಹಿರೇಮಹಾಲಿಂಗೇಶ್ವರ ದೇವಳದ ಒಲಗ ಮಂಟಪದಲ್ಲಿ ಅಯ್ಯಪ್ಪ ದೇವರ ಭಾವಚಿತ್ರ ಇರಿಸಿ ವಿಶೇಷ ಪೂಜಾ ಕಾರ್ಯಕ್ರಮ ನೆರವೆರಿಸಿದರು.
ಮಕರಜ್ಯೋತಿ ಬೆಳಗುವ ಸಂದರ್ಭದಲ್ಲಿ ದೇಳದ ಸುತ್ತಪೌಳಿ ಹಾಗೂ ಮರದ ಹಲಗೆ ಮೇಲೆ ಹಣತೆ ದೀಪವಿರಿಸಿ ಭಕ್ತರಿಂದ ಜ್ಯೋತಿ ಪ್ರಜ್ವಲಿಸಲಾಯಿತು.
Advertisement. Scroll to continue reading.
ಉಡುಪಿಯ ಅಯ್ಯಪ್ಪ ಗುರುಸ್ವಾಮಿ ವಿಜಯ ಬನ್ನಂಜೆ ಯವರಿಂದ ಧಾರ್ಮಿಕ ಪೂಜಾ ಕಾರ್ಯ ನೆರವೆರಿಸಿದರು.
ಶಬರಿಮಲೆಯಂತೆ ಹದಿನೆಂಟು ಮೆಟ್ಟಿಲುಗಳಲು ಸೃಷ್ಠಿಸಿ ಪಡಿಪೂಜೆ ನೆರವೆರಿಸಿ ಶ್ರೀದೇವರಿಗೆ ಮಂಗಳಾರತಿ ನೆರವೆರಿಸಲಾಯಿತು.ಪೂಜಾ ಉಸ್ತುವಾರಿಯನ್ನು ಅಘೋರೇಶ್ವರ ಅಯ್ಯಪ್ಪ ಭಕ್ತವೃಂದದಿಂದ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ನಂತರ ಶ್ರೀದೇವರ ಪ್ರಸಾದ ಹಾಗೂ ಪನ್ಯಾರಸೇವೆ ನಡೆಯಿತು.
ಈ ಸಂದರ್ಭದಲ್ಲಿ ಕೋಟ ಅಯ್ಯಪ್ಪ ಭಕ್ತವೃಂದದ ಅಧ್ಯಕ್ಷ ಚಂದ್ರ ಪೂಜಾರಿ ಕದ್ರಿಕಟ್ಟು, ಉಪಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಗೌರವಾಧ್ಯಕ್ಷ ಶ್ರೀಕಾಂತ್ ಶೆಣೈ, ಸಂಚಾಲಕ ಪ್ರದೀಪ್ ಪೂಜಾರಿ, ಗುರುಸ್ವಾಮಿಗಳಾದ ಸುರೇಶ್ ಮೇಸ್ತ್ರಿ,ಸಂತೋಷ್ ಪೂಜಾರಿ, ಸಾಲಿಗ್ರಾಮ ಪಟ್ಟಣಪಂಚಾಯತ್ ಸದಸ್ಯರಾದ ಶ್ಯಾಮಸುಂದರ್ ನಾಯರಿ, ರತ್ನನಾಗರಾಜ್ ಗಾಣಿಗ ಕಾರ್ಯಕಾರಿ ಸಮಿತಿ ಪ್ರದೀಪ್ ಶೆಟ್ಟಿ, ಶಶಿಧರ ಕುಂದರ್, ಶಿವರಾಮ ಬಂಗೇರ, ಜ್ಞಾನೇಶ್ ಆಚಾರ್ಯ, ಅಭಿಜಿತ್ ಕಾಂಚನ್, ,ಕೃಷ್ಣಮೂರ್ತಿ ಮರಕಾಲ, ಕೃಷ್ಣ ಆಚಾರ್ಯ, ಮಂಜುನಾಥ ನಾಯರಿ, ನಾರಾಯಣ ಗಿಳಿಯಾರು, ರಾಮಚಂದ್ರ ಐತಾಳ್, ಸಂತೋಷ್ ಪ್ರಭು, ಅಘೋರೇಶ್ವರ ಅಯ್ಯಪ್ಪ ಭಕ್ತವೃಂದದ ರಾಧಕೃಷ್ಣ ಬ್ರಹ್ಮಾವರ, ನಾಗರಾಜ್ ಐತಾಳ್, ಮತ್ತಿತರರು ಉಪಸ್ಥಿತರಿದ್ದರು
Advertisement. Scroll to continue reading.