ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಗಂಡು ಮಗುವಿಗೆ ತಂದೆಯಾಗಿದ್ದಾರೆ. ಯುವರಾಜ್ ಸಿಂಗ್ ಪತ್ನಿ ಪತ್ನಿ ಹೇಜಲ್ ಕೀಚ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಯುವರಾಜ್ ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನಮ್ಮ ಎಲ್ಲಾ ಅಭಿಮಾನಿಗಳು, ಕುಟುಂಬ ಮತ್ತು ಸ್ನೇಹಿತರಿಗೆ, ದೇವರು ನಮಗೆ ಗಂಡು ಮಗುವನ್ನು ಆಶೀರ್ವದಿಸಿದ್ದಾನೆ ಎಂದು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ. ಈ ಆಶೀರ್ವಾದಕ್ಕಾಗಿ ನಾವು ದೇವರಿಗೆ ಧನ್ಯವಾದ ಹೇಳುತ್ತೇವೆ. ನನ್ನ ಕುಟುಂಬದ ಚಿಕ್ಕವನನ್ನು ಜಗತ್ತಿಗೆ ಸ್ವಾಗತಿಸುವಾಗ ನೀವು ನಮ್ಮ ಗೌಪ್ಯತೆಯನ್ನು ಗೌರವಿಸಬೇಕೆಂದು ಬಯಸುತ್ತೇವೆ ಎಂದು ದಂಪತಿ ಟ್ವೀಟ್ ಮಾಡಿದ್ದಾರೆ.
Advertisement. Scroll to continue reading.
2016ರಲ್ಲಿ ಯುವರಾಜ್ ಸಿಂಗ್, ಬಾಲಿವುಡ್ ನಟಿಯಾಗಿದ್ದ ಹಜೆಲ್ ಕೀಚ್ ಅವರನ್ನು ವಿವಾಹವಾಗಿದ್ದರು.