ಬ್ರಹ್ಮಾವರ : ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರ ಮೆರವಣಿಗೆ
Published
3
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಥಬ್ದಚಿತ್ರ ನಿರಾಕರಣೆಗೊಂಡ ಹಿನ್ನೆಲೆಯಲ್ಲಿ ಮಾಜಿ ಸಂಸದ ಜನಾರ್ದನ ಪೂಜಾರಿಯವರು ಕರೆ ನೀಡಿದ ಪ್ರಯುಕ್ತ ಬುಧವಾರ ಉಡುಪಿ ಮತ್ತು ದಕ ಜಿಲ್ಲೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರದ ಮೆರವಣಿಗೆ ಉಡುಪಿ ಜಿಲ್ಲೆಯ ಉತ್ತರ ಭಾಗ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66 ಮೂಲಕ ಕಟಪಾಡಿಗೆ ಸಾಗಿ ಬಂತು.
ಬ್ರಹ್ಮಾವರ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ತೆರದ ವಾಹನದಲ್ಲಿ ನಾರಾಯಣ ಗುರುಗಳ ಭಾವಚಿತ್ರದೊಂದಿಗೆ ಗುರಿ ತೋರಿದ ಗುರುವಿಗೆ ಗೌರವ. ಸ್ವಾಭಿಮಾನದ ನಡಿಗೆ ಗುರುವಿನ ಕಡೆಗೆ ಎನ್ನುವ ಧ್ಯೇಯವಾಕ್ಯದೊಂದಿಗೆ ಕುಂದಾಪುರ ಬೈಂದೂರು ಸೇರಿದಂತೆ ನಾನಾ ಭಾಗದಿಂದ ಬಂದ ನೂರಾರು ವಾಹನ ಜಾಥಾದಲ್ಲಿತ್ತು.