ಕರಾವಳಿ

ಬ್ರಹ್ಮಾವರದ ಅಪಘಾತ ವಲಯಗಳಲ್ಲಿ ಸಂಚಾರ ನಿಯಂತ್ರಣ ದಳದಿಂದ ಕಾರ್ಯಾಚರಣೆ ಆರಂಭ

2

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರ ನಗರ ಭಾಗವೆನಿಸಿ ಹೆಚ್ಚು ಅಫಘಾತ ಸಂಭವಿಸುವ ಕೇಂದ್ರ ಎನಿಸಿದ ಮಹೇಶ್ ಆಸ್ಪತ್ರೆ, ಬಸ್ ನಿಲ್ದಾಣ, ಆಕಾಶವಾಣಿ ವೃತ್ತ , ಮತ್ತು ಧರ್ಮಾವರ ಭಾಗದಲ್ಲಿ ಇಂದಿನಿಂದ ಇಲ್ಲಿ ಠಾಣಾಧಿಕಾರಿ ಗುರುನಾಥ್ ಬಿ. ಹಾದಿಮನೆ ಯವರ ನೇತೃತ್ವದಲ್ಲಿ ಸಂಚಾರ ನಿಯಂತ್ರಣ ದಳ ವಾಹನ ಸಂಚಾರ ನಿಯಂತ್ರಣಕ್ಕೆ ಆರಂಭಿಸಿದೆ.
ಈ ಸಮಸ್ಯೆಯು ಕುರಿತು ಈ ಹಿಂದೆ ದಿಕ್ಸೂಚಿ ನ್ಯೂಸ್ ವಿಸ್ಕೃತ ವರದಿ ಮಾಡಿತ್ತು.

ನಾನಾ ಭಾಗದಿಂದ ಬರುವ ಪ್ರವಾಸಿಗರು ಯಾತ್ರಿಗಳ ವಾಹನ ಸಂಚಾರ ಮತ್ತು ಸರ್ವೀಸ್ ರಸ್ತೆ ಇದ್ದರೂ ಕೂಡಾ ಹೆದ್ದಾರಿಯಲ್ಲಿ ಸಂಚರಿಸುವ ಸ್ಥಳೀಯ ಬಸ್ ಗಳು ಅನೇಕ ಅಫಘಾತಗಳಿಗೆ ಕಾರಣವಾಗಿ ಇಲ್ಲಿನ ಸಾರ್ವಜನಿಕರು ಅಟೋ ಮತ್ತು ಕಾರು ಟೆಂಪೋ ಚಾಲಕ ಮಾಲಕರು ಸಮಸ್ಯೆ ಕುರಿತು ಠಾಣೆಗೆ ಮನವಿ ಮಾಡಿದ್ದರು.

ಹಲವಾರು ಶಾಲಾ ಕಾಲೇಜುಗಳು ಹೆದ್ದಾರಿ ಬಳಿಯಲ್ಲಿಯೇ ಇದ್ದು ಚಿಕ್ಕ ಮಕ್ಕಳು ಸೇರಿದಂತೆ ಸಾರ್ವಜನಿಕರಿಗೆ ರಸ್ತೆ ದಾಟುವುದು ಹರಸಾಹಸ ಪಡಬೇಕಾಗಿತ್ತು .
ಕೇವಲ3 ಕಿ.ಮೀ ದೂರದ ಈ ಅಂತರದಲ್ಲಿ ಅದೆಷ್ಟೋ ಜೀವವನ್ನು ಹೆದ್ದಾರಿ ಬಲಿ ಪಡೆದಿದೆ ಮತ್ತು ಅನೇಕರು ಅಂಗವಿಕಲರಾಗಿದ್ದಾರೆ.


ನಗರ ಭಾಗದಲ್ಲಿ ರಸ್ತೆ ಬಳಿಯಲ್ಲಿ ದ್ವಿಚಕ್ರ ವಾಹನ ಇರಿಸಿ ಹೋಗುವುದರಿಂದ ಅಂಗಡಿಯವರಿಗೆ ವ್ಯಾಪಾರಕ್ಕೆ ಬರುವ ಜನಕ್ಕೆ ದಾರಿ ಇಲ್ಲದಂತ ಪರಿಸ್ಥಿತಿ‌ ಇದೆಲ್ಲದಕ್ಕೂ ಇಂದಿನಿಂದ ಬ್ರೇಕ್ ಬೀಳಲಿದೆ. ಠಾಣೆಯ ಸುಂದರ್, ವೆಂಕಟರಮಣ, ಪ್ರವೀಣ ಶೆಟ್ಟಿಗಾರ್, ದಿಲೀಪ್ ಮತ್ತು ಹೊಯ್ಸಳ ವಾಹನ ಚಾಲಕ ಸಂತೋಷ್ ಇವರ ತಂಡ ಪ್ರತೀ ದಿನ ಎಲ್ಲಾ ಭಾಗದಿಂದ ಸಂಚಾರಿ ನಿಯಂತ್ರಣ ಮಾಡುತ್ತಿದ್ದಾರೆ.
ಇಲಾಖೆ ಮಾಡಲಾದ ಸಂಚಾರಿ ವ್ಯವಸ್ಥೆಯನ್ನು ಸಾರ್ವಜನಿಕರು ಅಳವಡಿಸಿಕೊಂಡಲ್ಲಿ ರಸ್ತೆಯಲ್ಲಿ ಆಗುವ ಅಫಘಾತ ನಿಯಂತ್ರಣದ ಪ್ರಯತ್ನ ಶ್ಲಾಘನೀಯ.

ಸಾರ್ವಜನಿಕರ ಹಿತಾಸಕ್ತಿಯಿಂದ ನಮ್ಮ ಠಾಣಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತೀ ಅಫಘಾತಗಳು ಸಂಭವಿಸುವ ಸ್ಥಳದಲ್ಲಿ 5 ಮಂದಿ ಪೋಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಕೆಲವೊಂದು ಮಾರ್ಪಾಡುಗಳನ್ನು ಮಾಡಲಾಗಿದೆ. ಸಾರ್ವಜನಿಕರು ರಸ್ತೆ ಸಂಚಾರ ಸುರಕ್ಷತೆಯ ನಿಯಮಕ್ಕೆ ಸಹಕರಿಸಬೇಕು.ಗುರುನಾಥ್ ಬಿ.ಹಾದಿಮನೆ, ಬ್ರಹ್ಮಾವರ ಪೋಲೀಸ್ ಠಾಣಾಧಿಕಾರಿ

ಬೆಳಿಗ್ಗೆ ಮತ್ತು ಸಂಜೆ ಬೆಂಗಳೂರು ಮೈಸೂರು, ಮುಂಬಯಿ, ಹುಬ್ಬಳ್ಳಿ , ಗದಗ, ಬೆಳಗಾಂ, ಹೈದರಾಬಾದ್ ಸೇರಿದಂತೆ ನಾನಾ ಭಾಗಕ್ಕೆ ಹೋಗುವ ಬಸ್ ಗಳು ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸುವುದನ್ನು ತಪ್ಪಿಸಿ ಬಸ್ ನಿಲ್ದಾಣದ ಬಳಿಯ ಸರ್ವೀಸ್ ರಸ್ತೆಯಲ್ಲಿ ನಿಲ್ಲಿಸಬೇಕು. ಇಲಾಖೆ ಅದನ್ನು ಕೂಡಾ ನಿಯಂತ್ರಿಸಲಿ.ಶಿವಪೂಜಾರಿ, ಬಸ್ ಕಂಡಕ್ಟರ್, ಬ್ರಹ್ಮಾವರ

Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com