ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಮುದ್ರಾಡಿ ನಾಟ್ಕದೂರು ಅಭಯಹಸ್ತೆ ಆದಿಶಕ್ತಿ ದೇವಸ್ಥಾನದ ನವೀಕೃತ ಶಿಲಾಮಯ ದೇಗುಲದ ಪುನರ್ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ನವಚಂಡಿಕಾ ಹೋಮಕ್ಕೆ ಭಾನುವಾರ ಹಸಿರು ಹೊರೆಕಾಣಿಕೆ ಸಮರ್ಪಣೆಗೆ ಮುದ್ರಾಡಿ ಗಣಪತಿ ದೇವಸ್ಥಾನದಿಂದ ಆದಿಶಕ್ತಿ ದೇವಸ್ಥಾನಕ್ಕೆ ಭವ್ಯ ಆಕರ್ಷಕ ಮೆರವಣಿಗೆ ನಡೆಯಿತು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬಜಗೋಳಿ ರವೀಂದ್ರ ಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ಭಜನಾ ತಂಡಗಳು, ಕಲಾ ತಂಡಗಳು ಮೆರವಣಿಗೆ ವಿಶೇಷ ಕಳೆ ನೀಡಿದವು.
ಈ ಸಂದರ್ಭ ದೇವಸ್ಥಾನದ ಆಡಳಿತ ಮೋಕ್ತೇಸರ್ ಸುಕುಮಾರ ಮೋಹನ್, ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕ ಮಂಜುನಾಥ ಹೆಗ್ಡೆ, ಕಾರ್ಯದರ್ಶಿ ಗಣಪತಿ ಎಂ, ಸಹ ಕಾರ್ಯದರ್ಶಿ ನವೀನ್ಕೋಟ್ಯಾನ್, ಪ್ರಮುಖರಾದ ವರಂಗ ವಿಠ್ಠಲ ಪೂಜಾರಿ, ಹೆಬ್ರಿ ಟಿ.ಜಿ.ಆಚಾರ್, ಸನತ್ ಕುಮಾರ್ ಶಶಿಕಲಾ ಡಿ.ಪೂಜಾರಿ, ಚಂದ್ರನಾಥ್ ಬಜಗೋಳಿ, ಕಮಲಾ ಮೋಹನ್, ಸೀತಾನದಿ ವಿಠ್ಠಲ ಶೆಟ್ಟಿ, ಮಂಜುನಾಥ ಟಿ. ಕಾಡುಹೊಳೆ, ಮುನಿಯಾಲು ಆನಂದ ಪೂಜಾರಿ, ರವಿ ಪೂಜಾರಿ ಚಟ್ಕಲ್ ಪಾದೆ, ಶುಭದರ ಶೆಟ್ಟಿ, ಸುಧೀಂದ್ರ ಮೋಹನ್, ಸುರೇಂದ್ರ ಮೋಹನ್, ಉಮೇಶ್ ಕಲ್ಮಾಡಿ, ಧರ್ಮಸ್ಥಳ ಯೋಜನೆಯ ಸೇವಾ ಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷರು,ವಿವಿಧ ಸಮಿತಿಯ ಪ್ರಮುಖರು ಭಾಗವಹಿಸಿದ್ದರು.
Advertisement. Scroll to continue reading.