ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಯೂಟ್ಯೂಬ್ ಚಾನೆಲ್ ಇಂದು 1 ಕೋಟಿ ಚಂದಾದಾರಿಕೆಗಳನ್ನು(subscribers) ದಾಟಿದೆ ಮತ್ತು ಅಗ್ರ ಜಾಗತಿಕ ನಾಯಕರಲ್ಲಿ ಅತ್ಯಧಿಕವಾಗಿದೆ.
ಅವರು ಅಕ್ಟೋಬರ್ 2007 ರಲ್ಲಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ಚಾನೆಲ್ ನ್ನು ಆರಂಭಿಸಲಾಗಿತ್ತು. ಇದುವರೆಗೆ ಚಾನೆಲ್ ನಲ್ಲಿ 164.31 ಕೋಟಿ ವೀಕ್ಷಣೆಗಳನ್ನು ಗಳಿಸಿದೆ.
ಅತಿ ಹೆಚ್ಚು ಸಬ್ಸ್ಕ್ರೈಬರ್ ನ್ನು ಹೊಂದುವ ಮೂಲಕ ಜಾಗತಿಕ ನಾಯಕರ ಪಟ್ಟಿಯಲ್ಲಿ ಪಿಎಂ ಮೋದಿ ಮೊದಲ ಸ್ಥಾನದಲ್ಲಿದ್ದರೆ, ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ 36 ಲಕ್ಷ ಚಂದಾದಾರರನ್ನು ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.
Advertisement. Scroll to continue reading.
ಕೆಲವು ರಾಷ್ಟ್ರೀಯ ನಾಯಕರಿಗೆ ಹೋಲಿಸಿದರೆ, ಪಿಎಂ ಮೋದಿ ಯುಟ್ಯೂಬ್ ಚಂದಾದಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 5.25 ಲಕ್ಷ ಚಂದಾದಾರರನ್ನು ಹೊಂದಿದ್ದು, ಪಕ್ಷದ ನಾಯಕ ಶಶಿ ತರೂರ್ 4.39 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ 3.73, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ 2.12 ಲಕ್ಷ ಮತ್ತು ಮನೀಶ್ ಸಿಸೋಡಿಯಾ 1.37 ಲಕ್ಷ ಸಬ್ಸ್ಕ್ರೈಬರ್ ಹೊಂದಿದ್ದಾರೆ.