ಬ್ರಹ್ಮಾವರ ವಕೀಲರ ಸಮಿತಿಯ ಅಧ್ಯಕ್ಷರಾಗಿ ಕಾಡೂರು ಪ್ರವೀಣ್ ಶೆಟ್ಟಿ ಆಯ್ಕೆ
Published
2
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬ್ರಹ್ಮಾವರ ವಕೀಲರ ಸಮಿತಿಯ ಅಧ್ಯಕ್ಷರಾಗಿ ಕಾಡೂರು ಪ್ರವೀಣ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಸೋಮವಾರ ಸಂಜೆ ಚಾಂತಾರು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಉಡುಪಿ ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್ರವರ ಅಧ್ಯಕ್ಷತೆಯಲ್ಲಿ ಬ್ರಹ್ಮಾವರ ಭಾಗದ ಜನರ ಬೇಡಿಕೆಯಾದ ತಾಲೂಕು ಕೇಂದ್ರವಾದ ಬ್ರಹ್ಮಾವರದಲ್ಲಿ ನ್ಯಾಯಾಲಯ ರಚನೆ ಯಾಗಬೇಕು ಎಂದು ಜಿಲ್ಲೆಯ ನಾನಾ ಭಾಗದ ನ್ಯಾಯವಾದಿಗಳ ಸಂಘಟನೆಯ ಪ್ರಮುಖರ ಸಭೆಯಲ್ಲಿ ಉಡುಪಿಯ ಹಿರೀಯ ನ್ಯಾಯವಾದಿ ಚೇರ್ಕಾಡಿ ವಿಜಯ ಹೆಗ್ಡೆಯವರ ಸಮ್ಮುಖದಲ್ಲಿ ಸರ್ವಾನು ಮತದಿಂದ ಆಯ್ಕೆ ಪ್ರಕ್ರಿಯೆ ಜರುಗಿತು.
ನ್ಯಾಯವಾದಿಗಳಾದ ಕೆ.ಜಿ ಶ್ರೀಪಾದ್ ರಾವ್ ಬ್ರಹ್ಮಾವರ . ನಾನಾ ತಾಲೂಕು ಸಂಘದ ಪಧಾಧಿಕಾರಿಗಳಾದ ಕುಂದಾಪುರ ಸಂಘದ ಅಧ್ಯಕ್ಷ ನಿರಂಜನ ಹೆಗ್ಡೆ , ಕಾರ್ಕಳದ ಸುನೀಲ್ ಕುಮಾರ್ , ಉಡುಪಿಯ ರೋನಾಲ್ಡ್ ಪ್ರವೀಣ್ , ಪ್ರಮೋದ್ ಹಂದೆ , ಪದ್ಮರಾಜ್ ಜೈನ್, ಬನ್ನಾಡಿ ಸೋಮನಾಥ್ ಹೆಗ್ಡೆ , ಲಕ್ಷ್ಮ ಣ ಶೆಟ್ಟಿ, ಶಿರಿಯಾರ ಪ್ರಭಾಕರ ನಾಯ್ಕ್ , ಟಿ ಮಂಜುನಾಥ್ , ರಾಘವೇಂದ್ರ ನಾಯ್ಕ್ ಸೇರಿದಂತೆ ಹಿರೀಯ ನ್ಯಾಯವಾದಿಗಳು ನೋಟರಿಯವರು ಹಾಜರಿದ್ದರು.